6
  • Latest
ಬರಗಾಲದಲ್ಲಿಯೂ ಅಧಿಕಾರಿಗಳ ಬಾಡೂಟ: ಮೀನು ಪ್ರದರ್ಶನಕ್ಕೆ 9.85 ಕೋಟಿ ರೂ ವೆಚ್ಚ!

ಬರಗಾಲದಲ್ಲಿಯೂ ಅಧಿಕಾರಿಗಳ ಬಾಡೂಟ: ಮೀನು ಪ್ರದರ್ಶನಕ್ಕೆ 9.85 ಕೋಟಿ ರೂ ವೆಚ್ಚ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಬರಗಾಲದಲ್ಲಿಯೂ ಅಧಿಕಾರಿಗಳ ಬಾಡೂಟ: ಮೀನು ಪ್ರದರ್ಶನಕ್ಕೆ 9.85 ಕೋಟಿ ರೂ ವೆಚ್ಚ!

AchyutKumar by AchyutKumar
in ರಾಜ್ಯ
ಬರಗಾಲದಲ್ಲಿಯೂ ಅಧಿಕಾರಿಗಳ ಬಾಡೂಟ: ಮೀನು ಪ್ರದರ್ಶನಕ್ಕೆ 9.85 ಕೋಟಿ ರೂ ವೆಚ್ಚ!

2024ರ ನವೆಂಬರಿನಲ್ಲಿ ಭಟ್ಕಳದಲ್ಲಿ ಮೂರು ದಿನ ಮೀನು ಮೇಳ ನಡೆದಿದ್ದು, ಇದಕ್ಕಾಗಿ ಸರ್ಕಾರ 9.85 ಕೋಟಿ ರೂ ವೆಚ್ಚ ಮಾಡಿದೆ. ಈ ಮೇಳದಿಂದ ಮೀನುಗಾರರಿಗೆ ಮಾತ್ರ ಯಾವುದೇ ಪ್ರಯೋಜನವಾಗಿಲ್ಲ!

ADVERTISEMENT

2024ರ ನವೆಂಬರ್ 21ರಿಂದ 23ರವರೆಗೆ ಭಟ್ಕಳದಲ್ಲಿ ಮೀನು ಮೇಳ ನಡೆಯಿತು. ಈ ಮೇಳದಲ್ಲಿ ಭಾಗವಹಿಸಿದ ಮೀನುಗಾರರಿಗೆ ಹೆಚ್ಚುವರಿ ಯಾವ ಸೌಲಭ್ಯವೂ ಸಿಗಲಿಲ್ಲ. ನಿತ್ಯವೂ ಸಮುದ್ರದ ಮೀನು ನೋಡುತ್ತಿದ್ದವರಿಗೆ ಅಕ್ವೇರಿಯಂ’ನಲ್ಲಿದ್ದ ಬಣ್ಣ ಬಣ್ಣದ ಮೀನು ತೋರಿಸಲಾಯಿತು. ಸ್ಪರ್ಧಾ ಕಾರ್ಯಕ್ರಮದ ನೆಪದಲ್ಲಿ ಒಂದಷ್ಟು ಬಹುಮಾನ ನೀಡಲಾಯಿತು. ಇದನ್ನು ಬಿಟ್ಟು ಮೀನುಗಾರರ ಅಭಿವೃದ್ಧಿಗಾಗಿ ಈ ಮೇಳೆ ಕಿಂಚಿತ್ತು ಉಪಯೋಗವಾಗಲಿಲ್ಲ.

ಮೊದಲು ಮೀನು ಮೇಳಕ್ಕೆ 2.40 ಕೋಟಿ ರೂ ವೆಚ್ಚ ಮಾಡುವ ಬಗ್ಗೆ ನಿರ್ಧರಿಸಲಾಗಿತ್ತು. ಮತ್ಸ್ಯಮೇಳದ ವೇದಿಕೆ ನಿರ್ಮಾಣಕ್ಕೆ 30 ಲಕ್ಷ ರೂ, ಪ್ರಚಾರಕ್ಕಾಗಿ 30 ಲಕ್ಷ ರೂ, ಮೇಳ ಆಯೋಜನೆಗೆ 75 ಲಕ್ಷ ರೂ, ಕರಪತ್ರ ವಿತರಣೆಗೆ 10 ಲಕ್ಷ ರೂ, ಸ್ಥಳ ಬಾಡಿಗೆ 15 ಲಕ್ಷ ರೂ, ಊಟೋಪಚಾರಕ್ಕೆ 30 ಲಕ್ಷ ರೂ, ವಸತಿಗೆ 15 ಲಕ್ಷ ರೂ, ನೆನಪಿನ ಕಾಣಿಕೆಗೆ 15 ಲಕ್ಷ ರೂ, ಸ್ಪರ್ಧಾ ಕಾರ್ಯಕ್ರಮಗಳಿಗೆ 20 ಲಕ್ಷ ರೂ ಸೇರಿ 2.40 ಕೋಟಿ ರೂ ವೆಚ್ಚ ಮಾಡುವ ಬಗ್ಗೆ ಮೊದಲು ನಿರ್ಧರಿಸಲಾಗಿತ್ತು. ಆದರೆ, ಈ ನಿರೀಕ್ಷೆಗೂ ಮೀರಿ 9.85 ಕೋಟಿ ರೂ ಮೀನು ಮೇಳಕ್ಕೆ ವೆಚ್ಚವಾಯಿತು. ಆ ವೆಚ್ಚ ಪಾವತಿ ಆರ್ಥಿಕ ಇಲಾಖೆಗೆ ದೊಡ್ಡ ಹೊರೆಯಾಯಿಯಿತು.

Advertisement. Scroll to continue reading.

ಸರ್ಕಾರಿ ನಿಯಮಗಳ ಪ್ರಕಾರ ಕಾರ್ಯಕ್ರಮ ಆಯೋಜಿಸುವ ಮುನ್ನ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು. ಅದಕ್ಕೆ ತಗಲುವ ವೆಚ್ಚಗಳ ಬಗ್ಗೆ ಆರ್ಥಿಕ ಇಲಾಖೆಗೆ ತಿಳಿಸಿ ಅನುಮೋದನೆ ಪಡೆಯಬೇಕು. ಕಾರ್ಯಕ್ರಮದಿಂದ ಆಗುವ ಉಪಯೋಗಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಬೇಕು. ಆರ್ಥಿಕ ಇಲಾಖೆಯ ಅನುಮೋದನೆ ದೊರೆತ ನಂತರವೇ ಕಾರ್ಯಕ್ರಮ ನಡೆಸಬೇಕು. ಆದರೆ, ಭಟ್ಕಳದಲ್ಲಿ ನಡೆದ ಮೀನು ಮೇಳಕ್ಕೆ ಈ ಯಾವ ನಿಯಮವೂ ಅನ್ವಯವಾಗಿಲ್ಲ!

Advertisement. Scroll to continue reading.

2024ರ ನವೆಂಬರಿನಲ್ಲಿ ಕಾರ್ಯಕ್ರಮದ ಸಿದ್ಧತೆ ನಡೆದರೂ ಅದಕ್ಕೆ ಸಂಬAಧಿಸಿ ಆರ್ಥಿಕ ಇಲಾಖೆಗೆ ಯಾವುದೇ ಮಾಹಿತಿ ಇರಲಿಲ್ಲ. 9.85 ಕೋಟಿ ರೂ ವೆಚ್ಚದ ಬಗ್ಗೆಯೂ ಅಧಿಕಾರಿಗಳು ಅಂದಾಜು ಪ್ರತಿ ಸಲ್ಲಿಸಿರಲಿಲ್ಲ. ಹೀಗಾಗಿ ಕಾರ್ಯಕ್ರಮ ಮುಗಿದ ನಂತರ ಹಣ ಪಾವತಿಗಾಗಿ ಆರ್ಥಿಕ ಇಲಾಖೆಗೆ ಪತ್ರ ರವಾನೆಯಾಗಿದೆ. ಇದಕ್ಕೆ ಆರ್ಥಿಕ ಇಲಾಖೆ ಅನುಮೋದನೆ ಪಡೆಯದಿರುವ ಬಗ್ಗೆ ಆಕ್ಷೇಪಿಸಿದೆ.

`ಇನ್ಮುಂದೆ ಆರ್ಥಿಕ ಇಲಾಖೆ ಅನುಮೋದನೆ ಪಡೆಯದೇ ಕಾರ್ಯಕ್ರಮ ನಡೆಸಬಾರದು. ಕಾರ್ಯಕ್ರಮ ನಡೆಸುವ ಮುನ್ನ ಪೂರ್ವಾನುಮತಿಯನ್ನು ಪಡೆಯಬೇಕು’ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತನಿಖಾ ವರದಿಗಳನ್ನು ಪ್ರಕಟಿಸುವ https://the-file.in/ ಈ ಹಗರಣವನ್ನು ಬೆಳಕಿಗೆ ತಂದಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ದಾಖಲೆಗಳಿಂದ ಮೀನು ಮೇಳದ ದುಂದುವೆಚ್ಚದ ವರದಿ ಹೊರ ಬಿದ್ದಿದೆ.

Previous Post

ಪ್ರಚೋದನಾಕಾರಿ ಬರಹ: ಫೇಸ್ಬುಕ್ ಬರಹಗಾರನ ವಿರುದ್ಧ ಪೊಲೀಸ್ ಪ್ರಕರಣ!

Next Post

ಕಾನೂನು ಮೀರಿದ ಅಧಿಕಾರಿಗಳಿಗೆ ಪ್ರಶಸ್ತಿ ಮಾತ್ರ ಬಾಕಿ!

Next Post
Only awards are due to officers who violate the law!

ಕಾನೂನು ಮೀರಿದ ಅಧಿಕಾರಿಗಳಿಗೆ ಪ್ರಶಸ್ತಿ ಮಾತ್ರ ಬಾಕಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ