6

ಕಾಡಿನಲ್ಲಿ ಕಾನೂನುಬಾಹಿರ ಆಟ: ಪೊಲೀಸರನ್ನು ಕಂಡ ಜೂಜುಕೋರರು ಕಕ್ಕಾಬಿಕ್ಕಿ!

ಮುರುಡೇಶ್ವರದ ಕಾಡಿನಲ್ಲಿ ಕಾನೂನುಬಾಹಿರ ಆಟವಾಡುತ್ತಿದ್ದಾಗ ಪಿಎಸ್‌ಐ ಹಣಮಂತ ಬೀರಾದರ್ ದಾಳಿ ನಡೆಸಿದ್ದಾರೆ. ಪೊಲೀಸರನ್ನು ಕಂಡ ನಾಲ್ವರು ದಿಕ್ಕಾಪಾಲಾಗಿ ಓಡಿದ್ದಾರೆ. ಅದಾಗಿಯೂ ಪೊಲೀಸರು ಇಬ್ಬರನ್ನು ಹಿಡಿದು ಜೈಲಿಗಟ್ಟಿದ್ದಾರೆ.

ಮೇ 11ರಂದು ಮಾಲೆಕೊಡ್ಲುವಿನ ಅಕೇಶಿಯಾ ಪ್ಲಾಟೇಶನ್ ಒಳಗೆ ಆರು ಜನ ಅಂದರ್ ಬಾಹರ್ ಆಡುತ್ತಿದ್ದರು. ಈ ವಿಷಯ ಅರಿತ ಮುರುಡೇಶ್ವರ ಪಿಎಸ್‌ಐ ಹಣಮಂತ ಬೀರಾದರ್ ತಮ್ಮ ತಂಡದೊ0ದಿಗೆ ಕಾಡಿನ ಒಳಗೆ ನುಗ್ಗಿದರು. ಚಾಪೆ ಹಾಸಿ ಇಸ್ಪಿಟ್ ಎಲೆಗಳನ್ನು ಹರಡಿಕೊಂಡಿAದ್ದ ಭಟ್ಕಳ ಬೇಂಗ್ರೆ ಮಾವಿನಕಟ್ಟಾದ ಚಾಲಕ ಜೋಸಿಪ್ ಲೂಯಿಸ್ ಹಾಗೂ ಶಿರಾಳಿ ಮಳ್ಳಿಮನೆ ತಟ್ಟಿಹಕ್ಲುವಿನ ಹೂವಿನ ವ್ಯಾಪಾರಿ ಮಂಜುನಾಥ ನಾಯ್ಕ ಸಿಕ್ಕಿ ಬಿದ್ದರು.

ಪೊಲೀಸರು ಬರುವ ಮುನ್ಸೂಚನೆ ಅರಿತ ಮಾವಿನಕಟ್ಟಾದ ರಾಘು ಹಾಗೂ ಗಣಪತಿ, ಅಳ್ವೆಕೋಡಿಯ ಗಣೇಶ ನಾಯ್ಕ, ಮಾವಿನಕಟ್ಟಾದ ಮೋಹನ ಓಡಿ ಪರಾರಿಯಾದರು. ಅದಾಗಿಯೂ ಪೊಲೀಸರು ಅವರ ಬೆನ್ನಟ್ಟಿದರು. ಆದರೆ, ಕಾಡಿನಲ್ಲಿ ದಿಕ್ಕಾಪಾಲಾಗಿ ಓಡಿದವರು ಮತ್ತೆ ಕಾಣಿಸಿಕೊಳ್ಳಲಿಲ್ಲ. ಸಿಕ್ಕಿಬಿದ್ದವರ ಬಳಿಯಿದ್ದ 3100ರೂ ಹಣದೊಂದಿಗೆ ಅಂದರ್ ಬಾಹರ್ ಆಡಲು ಬಳಸಿದ್ದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆಪಡೆದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page