ಜೋಯಿಡಾ: ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅಧಿಕಾರಿಗಳ ಸಭೆ ನಡೆಸಿದ್ದು, ಕೆಲಸ ಮಾಡದೇ ಕಾಲಹರಣ ಮಾಡುತ್ತಿರುವ ಅಧಿಕಾರಿಗಳಿಗೆ ಚಳಿ ಬಿಡಿಸಿದರು.
`ತೇಲೋಲಿ-ಗೋಡಶೇತ್ ಪಿ.ಎಮ್.ಜಿ.ಎಸ್‌ವೈ ರಸ್ತೆ ಕಾಮಗಾರಿ ಮುಗಿದಿಲ್ಲ. ವೈಯಕ್ತಿಕ ಜಾಗದ ಸಮಸ್ಯೆ ಇರುವುದರಿಂದ ಕಾಮಗಾರಿ ತಡೆಯಾಗಿದೆ. ಇದನ್ನು ತಹಶಿಲ್ದಾರರು ಸ್ಥಳ ಪರಿಶೀಲನೆ ನಡೆಸಿ ಸರಿಪಡಿಸಿಸಬೇಕು. ಬಜಾರಕುಣಂಗ ರಸ್ತೆ ಅರ್ಧಕ್ಕೆ ಬಿಟ್ಟ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ’ ಎಂದು ಗುಡುಗಿದರು.
`ಹಳೆಯ ಕಾಲದಲ್ಲಿ ಅರಣ್ಯ ಅತಿಕ್ರಮಣ ಮಾಡಿದವರಿಗೆ ತೊಂದರೆ ಕೊಡಬೇಡಿ. ನಾನು ಸಹ ಅರಣ್ಯದಲ್ಲಿಯೇ ಬೆಳೆದವನು. ಅರಣ್ಯ ಇಲಾಖೆ ಅನಗತ್ಯವಾಗಿ ಜನರಿಗೆ ತೊಂದರೆ ನೀಡುತ್ತಿದ್ದು ಇದನ್ನು ನಾನು ಸಹಿಸಲ್ಲ’ ಎಂದರು. `ಕಾರ್ಟೋಲಿಯಲ್ಲಿ ವಿದ್ಯುತ್ ಇಲ್ಲದ ಮನೆಗೆ ವಿದ್ಯುತ್ ಪೂರೈಕೆ ಮಾಡಬೇಕು. ಜನರಿಗೆ ವಿದ್ಯುತ್ ನೀಡುವಾಗ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ಕೊಡಬಾರದು’ ಎಂದು ಸೂಚಿಸಿದರು.
Discussion about this post