ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಜಂಬೇಸಾಲ್ ಎಂಬ ಊರನ್ನು ರಾಷ್ಟಮಟ್ಟದಲ್ಲಿ ಪ್ರಸಿದ್ಧಿಗೆ ತಂದ ಕೃಷಿ ಸಾಧಕಿ ಶ್ರೀಲತಾ ಹೆಗಡೆ ಅವರಿಗೆ ಊರಿನವರು ಮಂಗಳವಾರ ಗೌರವಿಸಿದರು.
ಶ್ರೀಲತಾ ಅವರು ಪುಷ್ಪಕೃಷಿಯಲ್ಲಿ ಮಾಡಿದ ಸಾಧನೆ ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯದಿಂದ ಸಂವಾದಕ್ಕೆ ಕರೆ ಬಂದಿತ್ತು. ಅದರ ಪ್ರಕಾರ ಜೂ 18ರಂದು ಅವರು ವಾರಣಾಸಿಗೆ ತೆರಳಿ ಪ್ರಧಾನಿಯವರ ಜೊತೆ ಮುಕ್ತ ಚರ್ಚೆ ನಡೆಸಿದ್ದರು. `ಕೃಷಿ ವಿಷಯದಲ್ಲಿ ಮಹಿಳೆಯರಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ’ ಎಂದು ಪ್ರತಿಪಾದಿಸಿದ್ದರು.
ಪ್ರಸ್ತುತ ಹುತ್ಕಂಡದ ಮಹಾಗಣಪತಿ ಕಲಾ ಬಳಗದ ಪರವಾಗಿ ಸಂಘದ ಗೌರವ ಅಧ್ಯಕ್ಷ ನಾಗರಾಜ ಕೌಡಿಕೇರೆ ಹಾಗೂ ಅಧ್ಯಕ್ಷ ಸುಬ್ಬಣ್ಣ ಉದ್ದಾಬೈಲ್ ಶ್ರೀಲತಾ ಹೆಗಡೆ ಅವರನ್ನು ಗೌರವಿಸಿದರು. ಪ್ರಮುಖರಾದ ಆರ್ ಎಸ್ ಭಟ್ಟ, ಗ್ರಾ ಪಂ ಅಧಿಕಾರಿ ರಾಜೇಶ ಶೇಟ್ ಇನ್ನಿತರರು ಜೊತೆಯಿದ್ದರು.
Discussion about this post