ಏ 1ರಿಂದ ಜೂ 17ರವರೆಗೆ ಸುರಿದ ಗಾಳಿಸಹಿತ ಮಳೆಯಿಂದ ಹೆಸ್ಕಾಂ’ಗೆ 31.81 ಕೋಟಿ ರೂ ನಷ್ಟವಾಗಿದೆ.
ಈವರೆಗೆ ಸುರಿದ ಮಳೆಯಿಂದ ವಿವಿಧ ಕಡೆ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕಗಳು, ವಿದ್ಯುತ್ ತಂತಿಗಳು ಹಾನಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡು ಧಾರವಾಡ, ಬೆಳಗಾವಿ, ವಿಜಯಪುರ, ಗದಗ, ಹಾವೇರಿ ಹಾಗೂ ಬಾಗಲಕೋಟೆ ಹೆಸ್ಕಾಂ ವ್ಯಾಪ್ತಿಗೆ ಬರುತ್ತದೆ. ಈ ಎಲ್ಲಾ ಕಡೆ ಸೇರಿ 10448 ವಿದ್ಯುತ್ ಕಂಬ ಮುರಿದಿದೆ. ಇದರಲ್ಲಿ 10076 ಕಂಬಗಳನ್ನು ದುರಸ್ತಿ ಮಾಡಲಾಗಿದ್ದು, 372 ಕಂಬಗಳ ದುರಸ್ತಿ ಬಾಕಿಯಿದೆ. 1216 ಟಿಸಿ ಸುಟ್ಟಿದ್ದು, ಅದರಲ್ಲಿ 1214 ಪರಿವರ್ತಕಗಳನ್ನು ದುರಸ್ತಿ ಮಾಡಲಾಗಿದೆ. ಹಾನಿಗೊಳಗಾದ 94.47 ಕಿ.ಮೀ ಉದ್ದದ ವಿದ್ಯುತ್ ತಂತಿಗಳ ಪೈಕಿ 92.24 ಕಿ.ಮೀ ಉದ್ದದ ತಂತಿ ಬದಲಿಸಲಾಗಿದೆ.
`ನಮ್ಮ ಸಿಬ್ಬಂದಿ ಅತ್ಯಂತ ಚುರುಕಿನಿಂದ ಕೆಲಸ ಮಾಡುತ್ತಿದ್ದು, ಜನರ ಸಮಸ್ಯೆಗೆ ಸದಾ ಸ್ಪಂದಿಸುತ್ತಿದ್ದಾರೆ. ಅಲ್ಲಲ್ಲಿ ವಿದ್ಯುತ್ ಇಲ್ಲದರಿದುವಾಗ ಜನ ಸಹಕರಿಸಬೇಕು’ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ ರೋಷನ್ ಮನವಿ ಮಾಡಿದ್ದಾರೆ.
Discussion about this post