ಯಲ್ಲಾಪುರ: ಮಲ್ಲಿಕಾ ಹೋಟೆಲ್ ಬಳಿ ನಡೆದ ಬೈಕ್ ಅಪಘಾತದಲ್ಲಿ ಗುಳ್ಳಾಪುರದ ಹೆಸ್ಕಾಂ ನೌಕರ ಗಂಗಾಧರ ಬೋವಿ ಸೇರಿ ಮೂವರು ಗಾಯಗೊಂಡಿದ್ದಾರೆ.
ಜೂ 16ರಂದು ರಾತ್ರಿ ಗುಲಬರ್ಗಾದ ಶೈಲೇಂದ್ರ ಪೌದಾರ ಹಾಗೂ ಪ್ರತೀಭಾ ಸೌದತ್ತಿ ಎಂಬಾತರು ಸಂಚರಿಸುತ್ತಿದ್ದ ಬೈಕ್ ಗಂಗಾಧರ ಬೋವಿ ಎಂಬಾತರ ಬೈಕಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಗಾಯಗೊಂಡವರು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಎರಡು ಬೈಕ್ ಜಖಂ ಆಗಿದ್ದು, `ಎರಡು ವಾಹನದವರ ನಿರ್ಲಕ್ಷö್ಯತನ ಹಾಗೂ ಅತಿಯಾದ ವೇಗದ ಚಾಲನೆ ದುರಂತಕ್ಕೆ ಕಾರಣ’ ಎಂದು ಪ್ರತ್ಯಕ್ಷದರ್ಶಿ, ಮಲ್ಲಿಕಾ ಹೋಟೆಲಿನ ದಿನೇಶ್ ಶೇಟ್ ಪೊಲೀಸ್ ದೂರು ನೀಡಿದ್ದಾರೆ.
Discussion about this post