2023-24ನೇ ಸಾಲಿನಲ್ಲಿ ವನ್ಯಜೀವಿಗಳಿಂದ ತೊಂದರೆಗೆ ಒಳಗಾದ 1525 ಪ್ರಕರಣಗಳು ವರದಿಯಾಗಿದ್ದು, ಈ ಎಲ್ಲಾ ಪ್ರಕರಣಗಳಿಗೂ ಸೇರಿ ಅರಣ್ಯ ಇಲಾಖೆ ಒಟ್ಟು: 24,79,6026 ರೂ ಪರಿಹಾರ ನೀಡಿದೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಆಶ್ರಯದಲ್ಲಿ ಶಿರಸಿಯಲ್ಲಿ ಜರುಗಿದ ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್‌ನಲ್ಲಿ ವನ್ಯಪ್ರಾಣಿಗಳಿಂದ ಮಾನವನಿಗೆ ಮತ್ತು ಸಾಗುವಳಿ ಕ್ಷೇತ್ರಕ್ಕೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ವಕೀಲ ರವೀಂದ್ರ ನಾಯ್ಕ ಬೆಳಕು ಚಲ್ಲಿದರು. ಆಗ ಶಿರಸಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಜ್ಜಯ್ಯ ಅಂಕಿ-ಸAಖ್ಯೆಗಳ ಮಾಹಿತಿ ತಿಳಿಸಿದರು.
ಜಿಲ್ಲೆಯಲ್ಲಿ ವನ್ಯಪ್ರಾಣಿಗಳಿಂದ ಬೆಳೆ ನಷ್ಟ ಉಂಟಾಗಿರುವ 1094 ಕುಟುಂಬಗಳಿಗೆ 1,15,09096 ರೂಪಾಯಿ, 410 ದನಕರಗಳ ಸಾವಿಗೆ 78,89,400, 3ಜನ ಮಾನವ ಸಾವಿಗೆ 37,50,000, ಭಾಗಶಃ ಅಂಗವೈಕ್ಯಲ್ಯವಾಗಿರುವ ಒಬ್ಬರಿಗೆ 2,50,000, 15 ಜನರಿಗೆ ವನ್ಯ ಪ್ರಾಣಿಯಿಂದ ಗಾಯವಾಗಿರುವುದಕ್ಕೆ 9,35,530 ಹಾಗೂ 2 ಜನ ಮಾಶಾಸನಕ್ಕೆ 4,62,000 ಪರಿಹಾರ ವಿತರಿಸಲಾಗಿದೆ ಎಂದವರು ಹೇಳಿದರು.
ಕಾಳಿ ಹುಲಿ ಯೋಜನೆ ಅಧಿಕಾರಿ ದಾಡೇoಲಿ, ನಿಲೇಶ ಕುಮಾರ ಮತ್ತು ಅರಣ್ಯ ಇಲಾಖೆಯ ತನಿಖಾ ತಂಡದ ಉಪ ಸಂರಕ್ಷಣಾಧಿಕಾರಿ ಅಜೀಜ್, ಹೋರಾಟಗಾರರ ವೇದಿಕೆಯ ಪದಾಧಿಕಾರಿಗಳಾದ ಜೆ.ಎಮ್ ಶೆಟ್ಟಿ, ಮಂಜುನಾಥ ಮರಾಠಿ, ರಮಾನಂದ ನಾಯ್ಕ ಅಚವೆ, ಬಾಲಚಂದ್ರ ಶೆಟ್ಟಿ ಇದ್ದರು.
Discussion about this post