ಸಂಚಾರ ನಿಷೇಧಿಸಿದ ರಸ್ತೆಗೆ ನುಗ್ಗಲು ಯತ್ನಿಸಿದ ವಾಹನವೊಂದನ್ನು ಪೊಲೀಸರು ಅಡ್ಡಗಟ್ಟಿದ್ದು, ಆ ವಾಹನದಲ್ಲಿ ಗೋಮಾಂಸ ಸಾಗಿಸುತ್ತಿರುವುದು ಗೊತ್ತಾಗಿದೆ. ಬೆಳಗಾವಿಯಿಂದ ಗೋವಾ ಕಡೆ ಅಕ್ರಮವಾಗಿ ರಪ್ತಾಗುತ್ತಿದ್ದ ಗೋಮಾಂಸವನ್ನು ಜೊಯಿಡಾ ರಾಮನಗರ ಪೊಲೀಸರು ತಡೆದಿದ್ದಾರೆ.
ರಾಮನಗರ ಪೊಲೀಸ್ ಠಾಣೆಯ ಪಿಎಸ್‌ಐ ಉದಯ ನಾಯಕ ಅವರು ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದರು. ರಾಮನಗರದ ಶಿವಾಜಿ ಸರ್ಕಲ್’ನಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ರಾಜಪ್ಪ ದೊಡ್ಡಮನಿ ಅವರು ಬೆಳಗಾವಿ ಕಡೆಯಿಂದ ಬಂದ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದರು. ಆದರೆ, ಆ ವಾಹನ ಚಾಲಕ ಗಾಡಿ ನಿಲ್ಲಿಸದೇ ವೇಗವಾಗಿ ಆನಮೋಡು ಕಡೆ ಹೊರಟಿದ್ದು, ಈ ವಿಷಯವನ್ನು ರಾಜಪ್ಪ ದೊಡ್ಡಮನಿ ಅವರು ಮೇಲಧಿಕಾರಿಗಳ ಗಮನಕ್ಕೆ ತಂದರು.