ಕುಮಟಾದ ಶಿಕ್ಷಕಿ ದೀಪಾ ಕಾಮತ್ ಅವರ ಸ್ಕೂಟಿಯನ್ನು ಕಳ್ಳರು ಅಪಹರಿಸಿದ್ದಾರೆ.
ಕುಮಟಾ ಹಿತ್ತಲಮಕ್ಕಿ ಸಿದ್ದೇಶ್ವರದ ದೀಪಾ ಕಾಮತ್ ಅವರು ಯಮಹಾ ಫ್ಯಾಸಿನೋ ಸ್ಕೂಟಿ ಹೊಂದಿದ್ದರು. ಜುಲೈ 5ರಂದು ಅದನ್ನು ತಮ್ಮ ಮನೆ ಮುಂದಿನ ಶೆಡ್ಡಿನ ಒಳಗೆ ನಿಲ್ಲಿಸಿದ್ದರು. ಕಳ್ಳರು ಅಲ್ಲಿಂದಲೇ ಅದನ್ನು ನಾಪತ್ತೆ ಮಾಡಿದ್ದಾರೆ.
ಭಟ್ಕಳದಲ್ಲಿ ವೆಲ್ಡಿಂಗ್ ಕೆಲಸ ಮಾಡುವ ಶಾಹಿಂ ಶಬ್ಬೀರ ಅವರು ಮುಗ್ದುಂ ಕಾಲೋನಿ ನಿವಾಸಿ. ಮಸೀದಿ ಮುಂದೆ ಬೈಕ್ ನಿಲ್ಲಿಸಿದ್ದರು. ಜೂನ್ 26ರಂದು ಅವರ 1 ಲಕ್ಷ ರೂ ಮೌಲ್ಯದ ಬೈಕ್ ಕಣ್ಮರೆಯಾಗಿದೆ.
ಬೈಕ್ ಕಳೆದುಕೊಂಡ ಅವರಿಬ್ಬರು ಇದೀಗ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಹನ ಹುಡುಕಿಕೊಡುವುದಾಗಿ ಭರವಸೆ ನೀಡಿದ್ದಾರೆ.