ಯಲ್ಲಾಪುರ: ತಾಲೂಕಿನ ತಟಗಾರ ಜೋಡಳ್ಳ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ದಿ.ಪಂಡಿತ ಸಂದೀಪ ಉಡುಪ ಅವರ ಸ್ಮರಣಾರ್ಥ ಗುರು ವಂದನೆ ಹಾಗೂ ನಾದಪೂರ್ಣಿಮಾ ಕಾರ್ಯಕ್ರಮ ಜು.10 ರ ಸಂಜೆ 4 ಕ್ಕೆ ನಡೆಯಲಿದೆ.
ಸ್ವರಮಾಧುರಿ ಸಂಗೀತ ವಿದ್ಯಾಲಯದ ಗುರುಗಳಾದ ವಾಣಿ ಹೆಗಡೆ, ಗಣಪತಿ ಹೆಗಡೆ ಹಾಗೂ ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಸ್ಥೆಯ ಅಧ್ಯಕ್ಷ ರಮೇಶ ಹೆಗಡೆ, ಗಣಪತಿ ಹೆಗಡೆ, ಸತೀಶ ಭಟ್ಟ ಹೆಗ್ಗಾರ, ಸುದಾಮ ದಾನಗೇರಿ ಪ್ರಕಟಣೆಯಲ್ಲಿ ಕೋರಿದ್ದಾರೆ.