ತನ್ನನ್ನು ತಾನು ಸಾಹಿತಿ ಎಂದು ಘೋಷಿಸಿಕೊಂಡಿರುವ ಡಾಕ್ಟರೇಟ್ ಪದವಿಧರೆ `ಶೃತಿ ಸೇರಿದಾಗ’ ಎಂಬ ಲೇಖಕಿಗೆ ಸಾರ್ವಜನಿಕರು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ `ಕೃತಿಚೌರ್ಯ’ ಪ್ರಶಸ್ತಿ ನೀಡಿದ್ದಾರೆ.
ಫೇಸ್ಬುಕ್’ನಲ್ಲಿ ಪ್ರಕಟವಾದ ಕಥೆಗಳನ್ನು ಕದ್ದು `ಪ್ರತಿಲಿಫಿ’ಯಲ್ಲಿ ಪ್ರಕಟಿಸುತ್ತಿದ್ದ ಆಕೆಯನ್ನು ಇದೀಗ `ಪ್ರತಿಲಿಫಿ’ ಸಹ ಹೊರಗಿಟ್ಟಿದೆ. ದಿನಕ್ಕೆ 4-5 ಚಿತ್ರ ವಿಮರ್ಶೆಗಳನ್ನು ಈಕೆ ಪ್ರಕಟಿಸುತ್ತಿದ್ದು, ದಿನದ 24 ಗಂಟೆಗಳ ಅವಧಿಯಲ್ಲಿ ಮೂರು ತಾಸಿನ ಈ ಎಲ್ಲಾ ಸಿನಿಮಾವನ್ನು ಆಕೆ ಹೇಗೆ ನೋಡಿದಳು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿತ್ತು. ಇತರೆ ಬರಹಗಾರರು ಆಕೆಯ ಬರಹವನ್ನು ಗುರುತಿಸಿ, `ಇದು ಫೇಸ್ಬುಕ್’ನಲ್ಲಿ ಮೊದಲೇ ಬೇರೆಯವರು ಪ್ರಕಟಿಸಿದ್ದಾರೆ’ ಎಂದು ಕಮೆಂಟ್ ಮಾಡಲು ಶುರು ಮಾಡಿದ್ದರು. ಕ್ರಾಂತಿ, ಫಾರೆಸ್ಟ್ ಗಂಪ್ ಸೇರಿದಂತೆ ಅನೇಕ ಸಿನೆಮಾ ವಿಮರ್ಶೆಗಳನ್ನು ಆಕೆ ಬೇರೆ ಬೇರೆ ಕಡೆಗಳಿಂದ ಕದ್ದು ಪ್ರಕಟಿಸಿರುವ ಆರೋಪಗಳಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ವರ್ಷದ ಹಿಂದೆ ಅನುರಾಗ್ ಗೌಡ ಎನ್ನುವವರು ಈ ಬಗ್ಗೆ ಪ್ರಶ್ನೆ ಮಾಡಿದ ನಂತರ ಆಕೆ ಅವರಿಂದ ಕದ್ದ ಬರಹವನ್ನು ಡಿಲಿಟ್ ಮಾಡಿದ್ದು, ಬೇರೆಯವರ ಬರಹ ಕದಿಯಲು ಶುರು ಮಾಡಿದ್ದಳು. ಪ್ರಸ್ತುತ ಕೃತಿಚೌರ್ಯ ಬಿರುದು ಪಡೆದಿರುವ ಆಕೆ ಡಾಕ್ಟರೇಟ್ ಪದವಿಧರೆ.
Discussion about this post