ಪ್ರಸಿದ್ಧ ಪ್ರವಾಸಿ ಹಾಗೂ ಪುಣ್ಯಕ್ಷೇತ್ರ ಗೋಕರ್ಣದಲ್ಲಿ ಏರ್‌ಟೆಲ್ ನೆಟ್‌ವರ್ಕ ಸಮಸ್ಯೆ ಕಾಡುತ್ತಿದೆ. ಇದರಿಂದ ಆ ಕಂಪನಿಯ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬುದು ಜನರ ದೂರು.
ಗೋಕರ್ಣ ಪೇಟೆಯಲ್ಲಿ ಪೂರ್ತಿ ನೆಟ್‌ವರ್ಕ ಸಿಕ್ಕರೂ ಫೋನ್ ಮಾಡಲು ಆಗುವುದಿಲ್ಲ. ಇಂಟರ್‌ನೆಟ್ ಅಂತೂ ಬರುವುದೇ ಇಲ್ಲ. ಬಿಜ್ಜೂರಿನ ಭಾಗದಲ್ಲಿ ನೆಟ್‌ವರ್ಕ ಹುಡುಕಲು ಗುಡ್ಡ ಏರಬೇಕಿದೆ. `ಪ್ರತಿ ತಿಂಗಳು ಹಣ ಪಾವತಿಸುತ್ತಿದ್ದರೂ ಕೆಲಸ ಮಾತ್ರ ಆಗುತ್ತಿಲ್ಲ. ಸಿಗ್ನಲ್ ಸಿಗದಿರುವುದರಿಂದ ತುರ್ತು ಸಮಯದಲ್ಲಿ ಫೋನ್ ಮಾಡಲು ಕಷ್ಟವಾಗುತ್ತಿದೆ’ ಎಂಬುದು ಜನರ ಅಳಲು.
Discussion about this post