ಯಲ್ಲಾಪುರ: ತಾಲೂಕಿನ ಕಿರವತ್ತಿ ಸಮೀಪದ ತೆಂಗಿನಗೇರಿಯ ತೋಟವೊಂದರಲ್ಲಿ ಅಡಗಿದ್ದ ಹೆಬ್ಬಾವನ್ನು ಉರಗಪ್ರೇಮಿ ಸೂರಜ್ ಶೆಟ್ಟಿ ಅರಬೈಲ್ ರಕ್ಷಿಸಿ ಕಾಡಿಗೆ ಬಿಟ್ಟರು.
ತೆಂಗಿನಗೇರಿಯ ಅಡಿಕೆ ವರ್ತಕ ನರಸಿಂಹ ಭಟ್ಟ ಅವರ ಅಡಿಕೆ ತೋಟದಲ್ಲಿ ಈ ಹೆಬ್ಬಾವು ಒಂದು ವಾರದಿಂದ ಠಿಕಾಣಿ ಹೂಡಿತ್ತು. ಸುತ್ತಮುತ್ತ ಓಡಾಡಲೂ ಸ್ಥಳೀಯರು ಆತಂಕ ಪಡುವಂತಾಗಿತ್ತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸೂರಜ ಶೆಟ್ಟಿ ಅರಬೈಲ್ ಅವರು ಸುಮಾರು 30 ಕೆಜಿ ತೂಕದ,10 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಿ ಕಾಡಿಗೆ ಬಿಟ್ಟರು. ವಿನಯ ಮರಾಠಿ ಹಾಗೂ ಹರೀಶ ಮಡಿವಾಳ ಅವರು ಸಹಕರಿಸಿದರು.