ಯಲ್ಲಾಪುರದ ಜೆಎಂಎಫ್ ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಅನಿತಾ ಕುಮಾರಿ ಅವರು ವಿವಿಧ ಅಂಗನವಾಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣದ ಗಣಪತಿಗಲ್ಲಿ, ಗಾಂಧೀನಗರ ಹಾಗೂ ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಜಂಬೇಸಾಲ ಅಂಗನವಾಡಿಗಳಿಗೆ ಅವರು ಭೇಟಿ ನೀಡಿದರು.
ಅಂಗನವಾಡಿಗಳಲ್ಲಿ ಮಕ್ಕಳ ಆರೋಗ್ಯವನ್ನು ವಿಚಾರಿಸಿದರು. ಪೌಷ್ಠಿಕ ಆಹಾರ ವಿತರಣೆ, ಶೌಚಾಲಯಗಳ ಸ್ವಚ್ಛತೆಗಳನ್ನು ಪರಿಶೀಲಿಸಿ, ಅಗತ್ಯ ಸಲಹೆ-ಸೂಚನೆ ನೀಡಿದರು.