ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ತೆಂಗಿನಗೇರಿ ಗ್ರಾಮಕ್ಕೆ ಯಲ್ಲಾಪುರದಿಂದ ಬಸ್ ಓಡಾಟ ಗುರುವಾರ ಆರಂಭಗೊಂಡಿದೆ.
ಗ್ರಾಮದಲ್ಲಿ ನೂತನ ಬಸ್ ಸಂಚಾರಕ್ಕೆ ಶಾಸಕ ಶಿವರಾಮ ಹೆಬ್ಬಾರ ಅವರು ಬಸ್ ಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ನಂತರ ಸ್ವಲ್ಪ ದೂರ ಬಸ್ ಬಲ್ಲಿ ಪ್ರಯಾಣಿಸಿದರು.
ಗ್ರಾಮದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿತ್ಯದ ಓಡಾಟಕ್ಕೆ ಬಸ್ ಸಂಚಾರದಿಂದ ಅನುಕೂಲವಾಗಲಿದೆ. ಖಾಸಗಿ, ಬಾಡಿಗೆ ವಾಹನಗಳನ್ನು ಆಶ್ರಯಿಸಿ ಹೋಗಬೇಕಾದ ಬವಣೆ ತಪ್ಪಲಿದೆ.
ಬಸ್ ಸಂಚಾರ ಆರಂಭಕ್ಕೆ ಕಾರಣರಾದ ಶಾಸಕ ಶಿವರಾಮ ಹೆಬ್ಬಾರ ಹಾಗೂ ಜಿ.ಪಂ ಮಾಜಿ ಸದಸ್ಯ ವಿಜಯ ಮಿರಾಶಿ ಅವರನ್ನು ಗ್ರಾಮಸ್ಥರು ಗೌರವಿಸಿದರು.
ಬಸ್ ಘಟಕದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.