ಕಾಡಿನಲ್ಲಿ ಜಾನುವಾರು ಮೇಯಿಸಲು ನಿಷೇಧ ವಿಧಿಸುವ ನಿರ್ಣಯ ಪ್ರಕಟಿಸಿರುವ ಅರಣ್ಯ ಮಂತ್ರಿಗಳ ನಿಲುವನ್ನು
ದನಗರ ಗೌಳಿ ಸಮುದಾಯ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ದೋಂಡು ಪಾಟೀಲ್ ಖಂಡಿಸಿದ್ದಾರೆ.
ಕರ್ನಾಟಕದಲ್ಲಿ ಅನೇಕ ದಶಕಗಳಿಂದ ಕಾಡಂಚಿನಲ್ಲಿ ದನಗರ ಗೌಳಿ ಹಾಗೂ ಧನಗಾಹಿ ಸಮುದಾಯಗಳು ಪಶುಪಾಲನೆಯ ಮೂಲಕ ಜೀವನ ಸಾಗುತ್ತಿದ್ದಾರೆ. ರಾಜ್ಯದ ಅನೇಕ ಬಡ ಸಮುದಾಯಗಳಿಗೆ ಕುರಿ, ಆಡು, ಎಮ್ಮೆ, ಹಸುಗಳೇ ಜೀವನಾಧಾರ. ಈಗ ಅರಣ್ಯಮಂತ್ರಿಗಳು, ಸರ್ಕಾರ ತಳೆದಿರುವ ಧೋರಣೆ ಬಡ ಸಮುದಾಯದವರಿಗೆ ತೊಂದರೆ ಉಂಟು ಮಾಡಲಿದೆ.
ಅರಣ್ಯ ಮಂತ್ರಿಗಳ ನಿರ್ಣಯವನ್ನು ವಿರೋಧಿಸುತ್ತೇವೆ. ಮುಖ್ಯಮಂತ್ರಿಗಳು ಸ್ವತಃ ಕುರುಬ ಸಮಾಜದವರಾಗಿದ್ದರಿಂದ, ಪಶುಪಾಲನೆಯ ಸಮುದಾಯಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮಕ್ಕೆ ಮುಂದಾಗಬೇಕು. ಜಾನುವಾರುಗಳನ್ನು ಮೇಯಲು ಕಾಡಿಗೆ ಬಿಡುವುದಕ್ಕೆ ಯಾವುದೇ ತೊಂದರೆ ಮಾಡಬಾರದು. ಸರ್ಕಾರ ತನ್ನ ನಿಲುವನ್ನು ಹಿಂಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.