ಯಲ್ಲಾಪುರ ತಾಲೂಕಿನ ಚಿಮನಳ್ಳಿಯ ಹಿರಿಯ ಸಾಮಾಜಿಕ ಕಾರ್ಯಕರ್ತ, ಉತ್ತಮ ಕೃಷಿಕರೂ ಆಗಿದ್ದ ಮಹಾಬಲೇಶ್ವರ ಸುಬ್ರಾಯ ಶೇಟ್ (92) ನಿಧನರಾಗಿದ್ದಾರೆ.
ಅವರು ಪತ್ನಿ ಪಾರ್ವತಿ ಶೇಟ್, ಪುತ್ರಿ, ಆರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಾಮಾಜಿಕ ಮುಂದಾಳುವಾಗಿ, ಹಿಂದೂ ಪರ ನಿಲುವನ್ನು ಹೊಂದಿದ್ದ ಮಹಾಬಲೇಶ್ವರ ಶೇಟ್, ಸ್ಥಳೀಯವಾಗಿ ಬಿಜೆಪಿಯ ಸಂಘಟನೆಗೆ ಶ್ರಮಿಸಿದ್ದರು. ಇವರ ಪುತ್ರರು ಯಲ್ಲಾಪುರದಲ್ಲಿ ಚಾಮುಂಡೇಶ್ವರಿ ಜ್ಯುವೆಲರಿ ಹಾಗೂ ಚಾಮುಂಡೇಶ್ವರಿ ಸ್ಟೇಶನರಿಯ ವರ್ತಕರಾಗಿ ಪರಿಚಿತರಾಗಿದ್ದಾರೆ.





