ಕಾರವಾರದಲ್ಲಿ ನಡೆದ ಸಭೆಯಲ್ಲಿ ಇಂಗ್ಲಿಷ್ ಮಾತನಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಕುಮಟಾ ಶಾಸಕ ದಿನಕರ ಶೆಟ್ಟಿ ಗರಂ ಆದರು. `ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ’ ಎಂದು ಸರ್ಕಾರ ಸಾರುವಾಗ ಕನ್ನಡ ಬಿಟ್ಟು ಆಂಗ್ಲ ಭಾಷೆ ಬಳಸುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಇಬ್ಬರು ಅಧಿಕಾರಿಗಳಿಗೆ ಶಾಸಕ ದಿನಕರ ಶೆಟ್ಟಿ `ಇಂಗ್ಲಿಷ್ ಬದಲು ಕನ್ನಡದಲ್ಲಿ ಮಾತನಾಡಿ’ ಎಂದು ಸಭೆಯಲ್ಲಿ ತಾಕೀತು ಮಾಡಿದರು. ನಗರಾಭಿವೃದ್ದಿ ಇಲಾಖೆಯ ಬಗ್ಗೆ ಮಾಹಿತಿಯನ್ನ ಪಡೆಯುವಾಗ ಅಧಿಕಾರಿ ಸ್ಟೆಲ್ಲಾ ವರ್ಗಿಸ್ ಇಂಗ್ಲೀಷ್’ನಲ್ಲಿ ಮಾತನಾಡಲು ಮುಂದಾದರು. ಶಾಸಕರ ದಿನಕರ ಶೆಟ್ಟಿ ಚೀಟಿಯೊಂದನ್ನ ಬರೆದುಕೊಟ್ಟು ಕನ್ನಡದಲ್ಲಿ ಮಾತನಾಡಲು ಸೂಚಿಸಿದರು. ಕಾರವಾರ ಉಪವಿಭಾಗಾಧಿಕಾರಿ ಸಹ ಇಂಗ್ಲೀಷ್’ನಲ್ಲಿ ಮಾತನಾಡುವಾಗ ನಿಮಗೆ ಕನ್ನಡ ಬರುವುದಿಲ್ಲವೇ? ಎಂದು ಪ್ರಶ್ನಿಸಿದರು.
Discussion about this post