ಹೊನ್ನಾವರ: ಕರಾವಳಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೇರುಸೊಪ್ಪ ಬಳಿ ಗುಡ್ಡ ಕುಸಿದಿದೆ.
ಜೂ 26ರ ರಾತ್ರಿ ಭಾಸ್ಕೇರಿ ಎಂಬ ಊರಿನಲ್ಲಿ ಹಾದು ಹೋದ ರಸ್ತೆಯ ಮೇಲೆ ಭಾರೀ ಪ್ರಮಾಣದ ಮಣ್ಣು ಬಂದು ಬಿದ್ದಿದೆ. ಇದರಿಂದ ಆ ಭಾಗದ ಸಂಚಾರಕ್ಕೆ ತೊಂದರೆಯಾಗಿದೆ. ಸಾರ್ವಜನಿಕರ ನೆರವಿನಿಂದ ರಸ್ತೆ ಸಂಪರ್ಕ ಸರಿಪಡಿಸುವ ಕಾರ್ಯ ನಡೆದಿದ್ದು, ಇದೀಗ ಯಂತ್ರಗಳನ್ನು ಬಳಸಿ ರಸ್ತೆಯ ಒಂದುಭಾಗವನ್ನು ಓಡಾಟಕ್ಕೆ ಮುಕ್ತಗೊಳಿಸಲಾಗಿದೆ.
Discussion about this post