ಯಲ್ಲಾಪುರ ತಾಲೂಕಿನ ಆನಗೋಡ ಸಮೀಪದ ಬೆಲ್ತರಗದ್ದೆಯಲ್ಲಿ ಸುರಿದು ಬೆಂಕಿ ಹಚ್ಚಿಕೊಂಡು ಗಾಯಗೊಂಡಿದ್ದ ಮಹಿಳೆ ಕೊನೆಯುಸಿರೆಳೆದಿದ್ದಾರೆ.
ಮಾದೇವಿ ನಾಗೇಶ ಸಿದ್ದಿ (48) ಮೃತ ಮಹಿಳೆ. ಗಂಡನಿಂದ ದೂರವಾಗಿ ವಾಸವಾಗಿದ್ದ ಈಕೆ, ಬಡತನದಿಂದ ನೊಂದು ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ಗಾಯಗೊಂಡ ಈಕೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಮನೆಗೆ ಕರೆತರಲಾಗಿತ್ತು.
ಈಕೆ ಮಂಗಳವಾರ ರಾತ್ರಿ ಮೃತಪಟ್ಟಿದ್ದು, ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.