ಬೈಕ್ ಸವಾರನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ನಡೆದಿದೆ.
ಡೊಂಬೇಕೈ ನಿವಾಸಿ ಸುವೇಕ ಶಿವಾನಂದ ಗೌಡ ಗಾಯಗೊಂಡ ವ್ಯಕ್ತಿ. ಕೆಲಸ ಮುಗಿಸಿ ಮನೆಗೆ ತೆರಳುತ್ತಿರುವಾಗ ಭುವನಗಿರಿ ಬಳಿ ಚಿರತೆಯೊಂದು ಬೈಕ್ ಮೇಲೆ ಎರಗಿದ್ದು ಸವಾರನ ಕಾಲಿಗೆ ಚಿರತೆಯ ಉಗುರುಗಳು ತಾಗಿ ಗಾಯವಾಗಿದೆ.
ಆತ ಬೈಕ್ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ.