ಯಲ್ಲಾಪುರ ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯತಿಯ ಆವಾರದಲ್ಲಿ 79 ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.
ಇದೇ ವೇಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ರಾಜರಾಜೇಶ್ವರಿ ಪ್ರೌಢಶಾಲೆಯ ವರ್ಷಾ ದಿಲೀಪ್ ರೊಖಡೆ, ರಾಜ್ಯಮಟ್ಟದ ಕ್ರೀಡಾಸ್ಪರ್ಧದಲ್ಲಿ ಭಾಗವಹಿಸಿದ ನಾದಶ್ರೀ ರಾಮಚಂದ್ರ ಭಟ್ಟ, ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕಾರ್ತಿಕ ಶ್ರೀಕಾಂತ ಬಾಟ್ರೆಕರ್, ಕಲಾವಿಭಾಗ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಸವಿತಾ ಶಿವಾನಂದ ಬೋವಿವಡ್ಡರ್ ಇವರನ್ನು ಪುರಸ್ಕರಿಸಲಾಯಿತು.
ಗ್ರಾ.ಪಂ ವ್ಯಾಪ್ತಿಯ 25ಕ್ಕೂ ಹೆಚ್ಚು ಅಂಗವಿಕಲರಿಗೆ ವಿಕಲಚೇತನರ ಮೀಸಲು ಅನುದಾನದಲ್ಲಿ ಚಾರ್ಜಿಂಗ್ ವಿದ್ಯುತ್ ಬಲ್ಬ್ ಗಳನ್ನು ವಿತರಣೆ ಮಾಡಲಾಯಿತು.
ಗ್ರಾ.ಪಂ ಅಧ್ಯಕ್ಷೆ ರೇಣುಕಾ ಬೋವಿವಡ್ಡರ್, ಉಪಾಧ್ಯಕ್ಷ ಗಣೇಶ್ ರೊಖಡೇ, ಸದಸ್ಯರಾದ ಸದಾಶಿವ ಚಿಕ್ಕೋತಿ, ರಘುಪತಿ ಹೆಗಡೆ, ವಿನಾಯಕ ನಾಯಕ, ಮಂಗಲಾ ನಾಯಕ, ಪಿಡಿಒ ರವಿ ಪಟಗಾರ ಉಪಸ್ಥಿತರಿದ್ದರು.