ಯಲ್ಲಾಪುರ ತಾಲೂಕಿನ ಹುತ್ಕಂಡ ಮಾರಿಕಾಂಬಾ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ಕಲಾ ಬಳಗದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ ವೇಷ ಸ್ಪರ್ಧೆ ನಡೆಯಿತು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಕಾರ್ಯಕ್ರಮ ಉದ್ಘಾಟಿಸಿದರು.
ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ ಮಾತನಾಡಿ, ಮಕ್ಕಳಲ್ಲಿ ದೇವರನ್ನು ಕಾಣುತ್ತೇವೆ. ಕಲಾ ಬಳಗ ಕೇವಲ ನಾಟಕಕ್ಕೆ ಸೀಮಿತವಾಗದೇ ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸಲು ಇಂತಹ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆರ್.ಎನ್.ಭಟ್ಟ ಮಾತನಾಡಿ, ಕೃಷ್ಣನ ಬಾಲಲೀಲೆಗಳನ್ನು ಕೇಳಿದ ನಮಗೆ, ಅದನ್ನು ನೋಡುವ ಅವಕಾಶ ಸಿಗುವುದು ಇಂತಹ ಸ್ಪರ್ಧೆಗಳಲ್ಲಿ. ಸ್ಪರ್ಧೆಗಿಂತ ಹೆಚ್ಚಾಗಿ ಅವರ ಭಾಗವಹಿಸುವಿಕೆಯೇ ಮುಖ್ಯ ಎಂದರು.
ಕಲಾ ಬಳಗದ ಅಧ್ಯಕ್ಷ ಸುಬ್ಬಣ್ಣ ಉದ್ದಾಬೈಲ ಮಾತನಾಡಿ, ಬಳಗದಿಂದ ಈ ಸ್ಪರ್ಧೆಯ ಹೊಸ ಪ್ರಯತ್ನ ಆರಂಭಿಸಿದ್ದೇವೆ. ಪ್ರತಿ ವರ್ಷವೂ ಇದನ್ನು ನಡೆಸುವ ಯೋಜನೆ ಹೊಂದಿದ್ದೇವೆ ಎಂದರು.
ಗ್ರಾ.ಪಂ ಉಪಾಧ್ಯಕ್ಷೆ ಶಾರದಾ ಭಾಗ್ವತ, ಮಾಜಿ ಅಧ್ಯಕ್ಷ ಅಪ್ಪು ಆಚಾರಿ, ದೇವಸ್ಥಾನದ ಕಾರ್ಯದರ್ಶಿ ನಾಗೇಶ ಭಟ್ಟ ಅಂಬುಳ್ಳಿ, ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಹೆಗಡೆ ಜಂಬೆಸಾಲ, ಕಲಾ ಬಳಗದ ಗೋಪಾಲಕೃಷ್ಣ ಭಟ್ಟ ಕೊಂಕಣಕೊಪ್ಪ, ರಾಘವೇಂದ್ರ ಕಬ್ಬಿನಗದ್ದೆ, ವಿಶ್ವನಾಥ ಉದ್ದಾಬೈಲ, ಹರಿಪ್ರಸಾದ ಭಟ್ಟ ಇತರರಿದ್ದರು. ಕಲಾ ಬಳಗದ ಖಜಾಂಚಿ ಚಂದ್ರಶೇಖರ ಭಟ್ಟ ಹುತ್ಕಂಡ ನಿರ್ವಹಿಸಿದರು. ಅರ್ಚನಾ ಹೆಗಡೆ ಜೂಜಿನಬೈಲ ವಂದಿಸಿದರು.
ಎರಡು ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಶ್ರೀಪ್ರದಾ ಭಟ್ಟ ಪ್ರಥಮ, ವೇದ ಶೇಟ್ ದ್ವಿತೀಯ, ಸುಪ್ರೀತ ಮರಾಠಿ ತೃತೀಯ ಸ್ಥಾನ ಪಡೆದರು. 2 ರಿಂದ 5 ವರ್ಷದೊಳಗಿನ ವಿಭಾಗದಲ್ಲಿ ಆದ್ಯಾ ನಾಯ್ಕ ಪ್ರಥಮ, ಅಚ್ಯುತ ಭಟ್ಟ ದ್ವಿತೀಯ, ಅಥರ್ವ ಹಂಗಾರಿ ತೃತೀಯ ಬಹುಮಾನ ಪಡೆದರು. 5 ರಿಂದ 8 ವರ್ಷದೊಳಗಿನ ವಿಭಾಗದಲ್ಲಿ ಪ್ರಣವ ಭಟ್ಟ ಪ್ರಥಮ, ಆರುಷ ಭಟ್ಟ ದ್ವಿತೀಯ, ಅದಿತಿ ಹೆಗಡೆ ತೃತೀಯ ಸ್ಥಾನ ಪಡೆದರು.
ವಿಜೇತರಿಗೆ ಬಳಗದಿಂದ ಬಹುಮಾನ ವಿತರಿಸಲಾಯಿತು. ಸುರೇಶ ನಾಯ್ಕ, ಶ್ರೀಧರ ಅಣಲಗಾರ ಹಾಗೂ ಸಿಂಧು ವೈದ್ಯ ನಿರ್ಣಾಯರಾಗಿ ಭಾಗವಹಿಸಿದ್ದರು.