ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ವಾಗರ್ಥ ತಾಳಮದ್ದಳೆ ಕೂಟ ಹಾಗೂ ಸೇವಾ ಸಹಕಾರಿ ಸಂಘ ಉಮ್ಮಚಗಿ ಇವರ ಸಹಯೋಗದಲ್ಲಿ ದಿವಂಗತ ನಾರಾಯಣ ಹೆಗಡೆ (ಎನ್.ಎಸ್.ಹೆಗಡೆ) ಶೀಗೇಮನೆಯವರ ಸಂಸ್ಮರಣಾ ಕಾರ್ಯಕ್ರಮ ಆಗಸ್ಟ್ 18 ರಂದು ಮಧ್ಯಾಹ್ನ 3 ಗಂಟೆಗೆ ಉಮ್ಮಚಗಿಯ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಲಿದೆ .
ಇದೇ ಸಂದರ್ಭದಲ್ಲಿ ಹೆಗಡೆಯವರ ಒಡನಾಡಿಗಳ ಅನುಭವಯುಕ್ತ ಲೇಖನಗಳನ್ನೊಳಗೊಂಡ ‘ಮನ ಮುಟ್ಟಿದ ಮಾತುಗಾರ’ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ .
ಉಮ್ಮಚಗಿ ಸೊಸೈಟಿ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ಯಾ ವಾಚಸ್ಪತಿ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ, ಅಕಾಡೆಮಿ ಸದಸ್ಯ ವಿದ್ಯಾಧರ ವೆಂಕಟೇಶ ಮಡಿವಾಳ ಭಾಗವಹಿಸಲಿದ್ದಾರೆ.
ನಂತರ ‘ಕರ್ಣಭೇದನ’ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಗಜಾನನ ಭಟ್ಟ ತುಳಗೇರಿ, ಶಂಕರ ಭಾಗವತ ಯಲ್ಲಾಪುರ ಭಾಗವಹಿಸಲಿದ್ದಾರೆ. ಅರ್ಥಧಾರಿಗಳಾಗಿ ದಿವಾಕರ ಹೆಗಡೆ ಕೆರೆಹೊಂಡ, ವಿದ್ವಾನ್ ಗಣಪತಿ ಭಟ್ಟ ಸಂಕದಗುಂಡಿ, ಮಂಜುನಾಥ ಭಟ್ಟ ಗೊರಮನೆ ಭಾಗವಹಿಸಲಿದ್ದಾರೆ .