ಯಲ್ಲಾಪುರ ತಾಲೂಕಿನ ವಜ್ರಳ್ಳಿ ನಡಿಗೆಮನೆಯ ಹಿರಿಯರಾದ ನಾರಾಯಣ ಭಟ್ಟ (86) ನಿಧನರಾಗಿದ್ದಾರೆ.
ಅವರು ಪುತ್ರರಾದ ಸಾಮಾಜಿಕ ಕಾರ್ಯಕರ್ತ ವಿ.ಎನ್.ಭಟ್ಟ, ನ್ಯಾಯವಾದಿ ಜಿ.ಎನ್.ಭಟ್ಟ ಸೇರಿದಂತೆ ಮೂರು ಪುತ್ರರು, ಪುತ್ರಿ ಹಾಗೂ ಬಂಧು-ಬಳಗದವರನ್ನು ಅಗಲಿದ್ದಾರೆ.
ವಜ್ರಳ್ಳಿಯಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳು ಆರಂಭವಾಗುವಲ್ಲಿ ಶ್ರಮಿಸಿದ್ದರು. ಸ್ಥಳೀಯರು ಮಾತ್ರವಲ್ಲ, ಜಿಲ್ಲೆಯ ವಿವಿಧೆಡೆಯಿಂದ ಇಲ್ಲಿಗೆ ಬಂದು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿ, ಭವಿಷ್ಯ ರೂಪಿಸಿಕೊಳ್ಳುವಲ್ಲಿ ಕಾರಣರಾಗಿದ್ದರು.
ಪ್ರೌಢಶಾಲೆಯ ಅಧ್ಯಕ್ಷರಾಗಿ, ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಳಕಳಿಯ ಮೂಲಕ ಹೆಸರಾಗಿದ್ದರು. ಪುರೋಹಿತರಾಗಿ ಶಿಷ್ಯವೃಂದದವರಿಗೆ ಸದಾ ಮಾರ್ಗದರ್ಶಕರಾಗಿದ್ದರು.