6 Skip to content

ಮಗಳ ಖಾಸಗಿ ಪೊಟೊ-ವಿಡಿಯೊ ಬಹಿರಂಗಗೊಳಿಸುವ ಬೆದರಿಕೆ: ಬ್ಲ್ಯಾಕ್ ಮೇಲರ್ ವಿರುದ್ಧ ದೂರು ನೀಡಿದ ತಂದೆ

ಮಗಳ ಖಾಸಗಿ ಫೊಟೊ, ವಿಡಿಯೊ ವೈರಲ್ ಮಾಡುವ ಬೆದರಿಕೆಯೊಡ್ಡಿ ತಂದೆ-ತಾಯಿಯರಿಂದ 35 ಲಕ್ಷ ರೂ ಹಣಕ್ಕೆ ಬೇಡಿಕೆಯಿಟ್ಟ ವ್ಯಕ್ತಿ ವಿರುದ್ಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಟ್ಕಳದ ಭಟ್ಟಗಾಂವ ನಿವಾಸಿ ಅನ್ವರ್ ಅವರಿಗೆ ಕರೆ ಮಾಡಿದ ವ್ಯಕ್ತಿ ‘ನಿನ್ನ ಮಗಳ ಖಾಸಗಿ ಪೊಟೊ ಮತ್ತು ವಿಡಿಯೊ ನನ್ನಲ್ಲಿದೆ, 20 ಲಕ್ಷ ರೂಪಾಯಿ ಹಣ ಕೊಡದಿದ್ದರೆ ಅದನ್ನು ಬಹಿರಂಗಗೊಳಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ.

ಅನ್ವರ್ ಪತ್ನಿ ಸಾಹಿರಾ ಅವರಿಗೂ ಕರೆ ಮಾಡಿ 15 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಕುರಿತು ಅನ್ವರ್ ದೂರು ನೀಡಿದ್ದು, ಕರೆ ಬಂದ ನಂಬರ್ ಆಧರಿಸಿ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.

You cannot copy content of this page