ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರ ತಾಲೂಕಿನ ಭರಣಿಯಲ್ಲಿ ನಡೆದಿದೆ.
ಮಾವಿನಕಟ್ಟಾದ ಮಂಜುನಾಥ ಸುಬ್ರಹ್ಮಣ್ಯ ಸಿದ್ದಿ (30) ಮೃತ ಯುವಕ. ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಸಮೀಪದ ಲಕ್ಷ್ಮೀ ಸಿದ್ದಿ ಎಂಬವರ ಅಡಿಕೆ ತೋಟದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ.
ಆಗಾಗ ಲಕ್ಷ್ಮೀ ಸಿದ್ದಿ ಅವರ ಮನೆಯ ಕಡೆ ಹೋಗುತ್ತಿದ್ದ ಈತ, ಅಲ್ಲಿಗೆ ಹೋದಾಗಲೇ ಅವರ ತೋಟದಲ್ಲಿ ನೇಣಿಗೆ ಶರಣಾಗಿದ್ದಾನೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಅವನ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







