6
September 29, 2026

ಮರದಿಂದ ಬಿದ್ದು ಕೃಷಿಕ ಸಾವು

ಮರದಿಂದ ಬಿದ್ದು ಕೃಷಿಕನೊಬ್ಬ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಮಾಗೋಡ ಸಮೀಪದ ಮೇಲಿನ ತಾರೀಮನೆಯಲ್ಲಿ ನಡೆದಿದೆ.

ಗಣಪತಿ ನಾರಾಯಣ ಭಟ್ಟ (62) ಮೃತ ಕೃಷಿಕ. ಇವರು ತಮ್ಮ ಅಡಿಕೆ ತೋಟಕ್ಕೆ ಹಾಕುವುದಕ್ಕಾಗಿ ಸೊಪ್ಪು ಕಡಿಯಲು ಮರ ಏರಿದಾಗ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content of this page