6

ಗಾಂಧಿ ಕುಟೀರದಲ್ಲಿ ಪಂಚಗವ್ಯ ಚಿಕಿತ್ಸೆ-ಗವ್ಯೋತ್ಪನ್ನ ಪ್ರಾತ್ಯಕ್ಷಿಕೆ

ಜಿಲ್ಲಾ ಗೋಸೇವಾ ಗತಿವಿಧಿಯ ಶಿರಸಿ ವಿಭಾಗ, ಪಂಚಗವ್ಯ ಚಿಕಿತ್ಸೆ ಮತ್ತು ಗವ್ಯೋತ್ಪನ್ನ ಮಾರಾಟ ಆಯಾಮ, ಶ್ರೀ ಗೋವರ್ಧನ ಗೋಶಾಲೆ ಕರಡೊಳ್ಳಿ, ಧನ್ವಂತರಿ ಆಯುರ್ವೇದಿಕ್ ಮಹಾವಿದ್ಯಾಲಯ ಸಿದ್ದಾಪುರ ಹಾಗೂ ಸಂಕಲ್ಪ ಸೇವಾ ಸಂಸ್ಥೆ ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಪಂಚಗವ್ಯ ಚಿಕಿತ್ಸೆ ಹಾಗೂ ಗವ್ಯೋತ್ಪನ್ನ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ನವೆಂಬರ್ 4 ರಂದು ಯಲ್ಲಾಪುರದ ಗಾಂಧಿ ಕುಟೀರದಲ್ಲಿ ಆಯೋಜಿಸಲಾಗಿದೆ.

ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಪಂಚಗವ್ಯ ಚಿಕಿತ್ಸೆ ನಡೆಯಲಿದ್ದು, ಡಾ.ಡಿ.ಪಿ.ರಮೇಶ, ಡಾ.ಪದ್ಮಾವತಿ ಕುಲಕರ್ಣಿ, ಡಾ.ವಿಜಯಕುಮಾರ ಮಠ ಉಪಸ್ಥಿತರಿದ್ದು ಚಿಕಿತ್ಸೆ ನೀಡಲಿದ್ದಾರೆ. ಪಂಚಗವ್ಯ ಆಧಾರಿತ ಕ್ಯಾನ್ಸರ್ ಪೂರಕ ಚಿಕಿತ್ಸೆ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದಾರೆ.

ಕ್ಯಾನ್ಸರ್ ಚಿಕಿತ್ಸೆಗೆ ಹಿಂದಿನ ತಪಾಸಣಾ ದಾಖಲೆಗಳನ್ನು ತರಬೇಕು.‌ ತಪಾಸಣೆಗೆ ಒಳಪಡಲು ಇಚ್ಛಿಸುವವರು ನವೆಂಬರ್ 3 ರ ಒಳಗೆ ನಾರಾಯಣ ಸಭಾಹಿತ- 8762520989 ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.

ಅಕ್ಟೋಬರ್ 31 ರಿಂದ ನವೆಂಬರ್ 4 ರವರೆಗೆ ಗಾಂಧಿ ಕುಟೀರದ ಆವಾರದಲ್ಲಿ ನಡೆಯಲಿರುವ 39 ನೇ ಸಂಕಲ್ಪ ಉತ್ಸವದ ಸಂದರ್ಭದಲ್ಲಿ ಗವ್ಯೋತ್ಪನ್ನಗಳನ್ನು ಮಳಿಗೆಗಳಲ್ಲಿ ಇಡಲು ಮುಕ್ತ ಅವಕಾಶವಿದೆ. ಆಸಕ್ತರು ಅಕ್ಟೋಬರ್ 28 ರ ಒಳಗೆ ಗಣಪತಿ ಭಟ್ಟ ಕೋಲಿಬೇಣ- 8762759240, ನಾರಾಯಣ ಸಭಾಹಿತ- 8762520989 ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಪ್ರಕಟಣೆಯಲ್ಲಿ ಕೋರಲಾಗಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page