ಜೂ 30ರಂದು ಕಾರವಾರದ 7 ಕಡೆ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದ್ದು, ಮೊಬೈಲ್, ಬ್ಲೂಟೂತ್ ಜೊತೆ ಕಾಲಿಗೆ ಶೂ ಧರಿಸುವುದನ್ನು ಸಹ ಇಲ್ಲಿ ನಿಷೇಧಿಸಲಾಗಿದೆ!
ಇಲ್ಲಿ ಒಟ್ಟೂ 984 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ದಿನದಂದು ಸಂಬAಧಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಪ್ರಾರಂಭವಾಗುವ 1 ತಾಸು ಮುಂಚಿತವಾಗಿ ಅಭ್ಯರ್ಥಿಗಳು ಹಾಜರಿದ್ದು, ಪರೀಕ್ಷೆ ಪ್ರಾರಂಭವಾಗುವ ಅರ್ಧ ಘಂಟೆ ಮುಂಚಿತವಾಗಿ ತಮಗೆ ಸಂಬAಧಿಸಿದ ಆಸನದಲ್ಲಿ ಆಸೀನರಾಗಿರಬೇಕು. ಆ ನಂತರ ಬರುವ ಅಭ್ಯರ್ಥಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಇಲ್ಲ. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತರುವಂತಿಲ್ಲ. ಮೊಬೈಲ್, ಕ್ಯಾಲ್ಕುಲೇಟರ್ ವಾಚ್, ಮೈಕ್ರೋ ಫೋನ್, ಬ್ಲೂ ಟೂತ್ ಜೊತೆ ಕಾಲಿಗೆ ಶೂ ಮತ್ತು ಸಾಕ್ಸ್ ಹಾಕಿಕೊಂಡು ಬರುವುದನ್ನು ನಿಷೇಧಿಸಲಾಗಿದೆ
Discussion about this post