ಸೆ.19ರಂದು ಹಾವೇರಿ ನಗರ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯ
ಹಾವೇರಿ: ಹಾವೇರಿ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ್ 19ರಂದು ಶನಿವಾರ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
110 ಕೆ.ವಿ. ಹಾವೇರಿ ಹಾಗೂ 33 ಕೆ.ವಿ. ಕೇರಿಮತ್ತಿಹಳ್ಳಿ, ಗಾಂಧೀಪುರ ಮತ್ತು ಆಡೂರ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಈ ಅವಧಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು
ಸಂಪೂರ್ಣ ಹಾವೇರಿ ನಗರ, ಆಲದಕಟ್ಟಿ, ಚಿಕ್ಕಲಿಂಗದಹಳ್ಳಿ, ದೇವಗಿರಿ, ಡಿ.ಸಿ. ಆಫೀಸ್, ದೇವಗಿರಿಯಲ್ಲಾಪುರ, ನಾಗನೂರ, ಕೋಳುರು, ಕರ್ಜಗಿ, ಯತ್ತಿನಹಳ್ಳಿ, ದೇವಿಹೊಸೂರು, ದಿಡಗೂರು, ಹಿರೇಲಿಂಗದಹಳ್ಳಿ, ಹೊಂಬರಡಿ, ಹೊಸಳ್ಳಿ, ಕಬ್ಬರ, ಕಲ್ಲಾಪುರ, ಕನಕಾಪುರ, ಕೇರಿಮತ್ತಿಹಳ್ಳಿ, ಸಂಗೂರು, ತೋಟದಯಲ್ಲಾಪುರ, ವೀರಾಪುರ, ವೆಂಕಟಾಪುರ, ಗೌರಾಪುರ, ಎಸ್.ಪಿ. ಆಫೀಸ್, ಕುರುಬಗೊಂಡ, ಬಿದರಗಡ್ಡಿ, ಕೋಡಿಹಳ್ಳಿ, ತಿಮ್ಮಾಪುರ, ಕುಳೇನೂರು, ಕಲ್ಲಾಮರ ಹಾಗೂ ಹೊಸೂರು ಸೇರಿದಂತೆ ಸಂಬಂಧಿತ ಫೀಡರ್‌ಗಳ ವ್ಯಾಪ್ತಿಗೆ ಬರುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ನಿರ್ವಹಣಾ ಕಾಮಗಾರಿ ನಡೆಯುವ ಸಮಯದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.




