ಹಾವೇರಿ: ಶಿಗ್ಗಾಂವ ತಾಲೂಕು ಮುಗಳಿ ಗ್ರಾಮದ 36 ವರ್ಷದ ಗಂಗಾಧರ ದ್ಯಾಮಪ್ಪ ತಳವಾರ ಎಂಬಾತನು ಆಗಸ್ಟ್ 12, 2026 ರಂದು ಮನೆಯಿಂದ ಹೋದವನು ಮರಳಿ ಬಾರದೆ ಕಾಣೆಯಾಗಿರುವುದಾಗಿ ಶಿಗ್ಗಾಂವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕಾಣೆಯಾದ ವ್ಯಕ್ತಿಯು 5.1 ಅಡಿ ಎತ್ತರ, ಸಾಧಾರಣ ಮೈಕಟ್ಟು ಹಾಗೂ ಗೋದಿ ಬಣ್ಣ ಹೊಂದಿದ್ದು, ಕೆಂಪು ಬಣ್ಣದ ಜಾಕೇಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ ಎಂದು ಶಿಗ್ಗಾಂವ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಕುರಿತು ಮಾಹಿತಿ ದೊರೆತಲ್ಲಿ ಶಿಗ್ಗಾಂವ ಪೊಲೀಸ್ ಠಾಣೆಗೆ ತಿಳಿಸುವಂತೆ ಮನವಿ ಮಾಡಲಾಗಿದೆ.




