ಕಾರವಾರ: `ಸರಕಾರಕ್ಕೆ ಯೋಜನೆಗಳನ್ನು ರೂಪಿಸುವಾಗ ನಿಖರವಾದ ಅಂಕಿ ಸಂಖ್ಯೆಗಳು ಅತ್ಯಗತ್ಯವಾಗಿದ್ದು, ಯೋಜನೆಗಳು ಯಶಸ್ವಿಯಾಗುವಲ್ಲಿ ಇವುಗಳ ಪಾತ್ರ ಅತೀ ಮುಖ್ಯ’ ಎಂದು ಅಂಕಿ-ಸoಖ್ಯೆ ಇಲಾಖೆಯ ನಿವೃತ್ತ ಅಧಿಕಾರಿಯೂ ಆಗಿರುವ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಅಣ್ವೇಕರ್ ಹೇಳಿದರು.
ಪ್ರಖ್ಯಾತ ಸಂಖ್ಯಾ ಶಾಸ್ತಜ್ಞ ಪ್ರೊ. ಪಿ. ಸಿ. ಮಹಾಲನೋಬಿಸ್ ಜನ್ಮ ದಿನದ ಅಂಗವಾಗಿ ಕಾರವಾರದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ನಡೆದ `18 ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
`ನಂಬಲರ್ಹ ಅಂಕಿ ಅಂಶಗಳನ್ನು ಕಾಲಮಿತಿಯೊಳಗಾಗಿ ಸಂಗ್ರಹಿಸಿ ವಿಶ್ಲೇಷಣಾ ವರದಿಯನ್ನು ಪ್ರಕಟಿಸುವಲ್ಲಿ ಸಾಂಖ್ಯಿಕ ಇಲಾಖೆಯ ಪಾತ್ರ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ಸಾಂಖ್ಯಿಕ ಸಿಬ್ಬಂದಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದರು.
ಸಮಾರoಭದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ ಮೇಸ್ತ ಮಾತನಾಡಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಸಿ.ಎಸ್.ಬಣಕಾರ್ ಇದ್ದರು. ಸಹಾಯಕ ನಿರ್ದೇಶಕ ದತ್ತಾತ್ರಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಅಶ್ವಿನಿ ಮೇಸ್ತ ಸ್ವಾಗತಿಸಿದರು. ಸರೋಜಿನಿ ನಾಯ್ಕ ನಿರೂಪಿಸಿ, ಶಿಲ್ಪಾ ಗೌಡ ವಂದಿಸಿದರು.
Discussion about this post