ಹಾವೇರಿಯಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಹಾವೇರಿ: ರಾಜವೀರ ಮದಕರಿ ನಾಯಕ ಜಯಂತಿಯ ಪ್ರಯುಕ್ತ ಹಾವೇರಿ ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ವೀರ ಮದಕರಿ ಸರ್ಕಲ್ನಲ್ಲಿ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವೀರ ಮದಕರಿ ನಾಯಕ ಅವರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯ ಅಗಡಿ ಕ್ಷೇತ್ರದ ಆಕಾಂಕ್ಷಿ ನಾಗರಾಜ ಚನ್ನೂರ ಸೇರಿದಂತೆ ಸಮಾಜದ ಮುಖಂಡರಾದ ಶ್ರೀಕಾಂತ ಪೂಜಾರ, ಮಂಜುನಾಥ ಇಟಗಿ, ರವಿ ಗೊಡ್ಡೆಮ್ಮಿ, ಜಗದೀಶ ಕೊಂಡೆಮ್ಮನವರ, ಶ್ರೀಮತಿ ಗೀತಾ ಪ್ರಕಾಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.








