ಹಲಗೇರಿ–ಹರಿಹರ ಮಾರ್ಗದಲ್ಲಿ 18 ರೋಡ್ ಹಂಪ್ಸ್: ಅಧಿಕಾರಿಗಳ ವಿರುದ್ಧ ಬಿ.ಸಿ. ಪಾಟೀಲ್ ಆಕ್ರೋಶ!
ಹಾವೇರಿ: ಹಲಗೇರಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹರಿಹರಕ್ಕೆ ತೆರಳುವ ರಸ್ತೆಯಲ್ಲಿ 18 ರೋಡ್ ಹಂಪ್ಸ್ಗಳನ್ನು ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ 18 ಮೆಟ್ಟಿಲುಗಳನ್ನು ಏರಿದ ರೀತಿಯಲ್ಲಿ ಹಲಗೇರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಹರಿಹರಕ್ಕೆ ಹೋಗುವ ದಾರಿಯಲ್ಲಿ 18 ರೋಡ್ ಹಂಸ್ (Humps)ಗಳನ್ನು ದಾಟಬೇಕಾಗುತ್ತೆ ಇದು ಯಾವ ಕಾನೂನಿನ ಅಡಿ ಇದೆ, ಇದರಿಂದ ಪ್ರಯಾಣಿಕರಿಗೆ ಎಷ್ಟು ತೊಂದರೆ ಆಗುತ್ತದೆ, ಎಷ್ಟು ಸಮಯ ಹಾಳಾಗುತ್ತದೆ ಹಾಗೂ ಎಷ್ಟು ಇಂಧನ ಹಾಳಾಗುತ್ತದೆ. ಇಲಾಖೆ ಅಧಿಕಾರಿಗಳು ಏನು ಕತ್ತೆ ಕಾಯುತ್ತಿದ್ದಾರಾ ಅಥವಾ ತಾಲೂಕಿನ ಶಾಸಕರು ಇದರ ಬಗ್ಗೆ ಗಮನವನ್ನು ಹರಿಸುತ್ತಿಲ್ಲವಾ? ಇದು ಒಂದು ತರಹ ದುರ್ದೈವದ ಸಂಗತಿ.ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಸಾಮಾಜಿಕ ಜಾಲತಾಣದ ಮೂಲಕ ವಿಷಯ ಹಂಚಿಕೊಂಡಿದ್ದಾರೆ.







