ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿರುವ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ತಂದೆಯ ಹೆಸರಿನಲ್ಲಿ ಗಿಡ ನೆಡುವ ಮೂಲಕ ಅವರ ನೆನಪನ್ನು ಸದಾ ಹಸಿರಾಗಿಡುವ ಪ್ರಯತ್ನ ಮಾಡಿದ್ದಾರೆ.
ಶಿರಸಿಯ ಕಾಗೇರಿಯಲ್ಲಿನ ತಮ್ಮ ಮನೆ ಹಿಂದೆ ಅವರು ಔಷಧಿಯ ಗಿಡ ನಾಟಿ ಮಾಡಿದರು. 2019ರಲ್ಲಿ ವಿಶ್ವೇಶ್ವರ ಹೆಗಡೆ ಅವರ ತಂದೆ ಅನಂತ ಹೆಗಡೆ ನಿಧನರಾಗಿದ್ದರು. ಜೂ 29ರಂದು ಅವರ ಪುಣ್ಯತಿಥಿ ಇತ್ತು. ಈ ಹಿನ್ನಲೆ ಗಿಡ ತರಿಸಿಕೊಂಡಿದ್ದ ಅವರು ಜೂ 30ರ ಬೆಳಗ್ಗೆ ಅದನ್ನು ನಾಟಿ ಮಾಡಿ, ನೀರೆರೆದರು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತಾಯಿ ಸರ್ವೇಶ್ವರಿ ಹೆಗಡೆ ಸಹ ಜೊತೆಗಿದ್ದರು.
Discussion about this post