ಶಿರಸಿ: ಬಿ ಎಸ್ ಎನ್ ಎಲ್ ಕಚೇರಿಗೆ ನಕಲಿ ಬಿಲ್ ನೀಡಿ ಹಣ ಲಪಟಾಯಿಸಿದ ಶಿವಮೊಗ್ಗದ ನಾಗರಾಜ ಭಟ್ಟ ಎಂಬಾತ ಇದನ್ನು ಪ್ರಶ್ನಿಸಿದ ಸುಹಾಸ್ ಹೆಗಡೆ ಎಂಬಾತರ ಮೇಲೆ ಹಲ್ಲೆ ನಡೆಸಿದ್ದಾನೆ.
ಸೊರಬದ ನಾಗರಾಜ ಭಟ್ಟ ಎಂಬಾತ ಬಿ ಎಸ್ ಎನ್ ಎಲ್ ಕಚೇರಿಗೆ ನಕಲಿ ಬಿಲ್ ನೀಡಿ, ಸುಹಾಸ್ ಹೆಗಡೆಯ ಸಹಿಯನ್ನು ಪೋರ್ಜರಿ ಮಾಡಿ ಹಣ ಹೊಡೆದಿದ್ದ. 2023ರ ಅಗಷ್ಟ್ 8ರಂದು ಶಿರಸಿ ಐತಾಳಮನೆಯ ಸುಹಾಸ್ ಹೆಗಡೆ ಇದನ್ನು ಪ್ರಶ್ನಿಸಿದ್ದ. ಆಗ ಕೂಡಲೇ ‘1 ಲಕ್ಷ ರೂ ಕೊಡಬೇಕು’ ಎಂದು ಸುಬ್ರಾಯ ಭಟ್ಟ ಹೇಳಿದ್ದ. ಇದಕ್ಕೆ ನಿರಾಕರಿಸಿದ ಕಾರಣ ಸುಬ್ರಾಯ ಭಟ್ಟ ಗಣೇಶನಗರದ ಪತ್ರಿಕಾ ಭವನದ ಎದುರು ಸುಹಾಸ್ ಹೆಗಡೆಯ ಕಾಲರ್ ಹಿಡಿದು ಕೆನ್ನೆಗೆ ಹೊಡೆದಿದ್ದ. ಈ ಬಗ್ಗೆ ಸುಹಾಸ್ ಹೆಗಡೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು, ಅದು ಇದೀಗ ಶಿರಸಿ ಗ್ರಾಮೀಣ ಠಾಣೆಗೆ ವರ್ಗವಾಗಿದೆ.
Discussion about this post