*ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ
ಮತಗಟ್ಟೆ ಸ್ಥಾಪನೆ ಮಾಡಿದ ಶಾಲಾ – ಕಾಲೇಜುಗಳಿಗೆ ರಜೆ*
ಹಾವೇರಿ : ಅ.21: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತದಾನವು ದಿನಾಂಕ 23.10.2026 ರಂದು ಜರುಗಲಿದ್ದು, ಹಾವೇರಿ ಜಿಲ್ಲೆಯ 08 ತಾಲೂಕುಗಳಲ್ಲಿ ಈಗಾಗಲೇ ಒಟ್ಟು 29 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಮತಗಟ್ಟೆಗಳ ಪೈಕಿ ಯಾವ ಶಾಲಾ / ಕಾಲೇಜುಗಳಲ್ಲಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆಯೋ ಅಂತಹ ಶಾಲಾ ಮತ್ತು ಕಾಲೇಜುಗಳಿಗೆ ದಿನಾಂಕ 22-10-2026 ಹಾಗೂ 23-10-2026 ರಂದು ಚುನಾವಣಾ ಪ್ರಕ್ರಿಯೆ ಸುಗಮಗೊಳಿಸುವ ಹಿನ್ನೆಲೆಯಲ್ಲಿ ಎರಡು ದಿನಗಳಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಾಹಾoತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
*ಮತಗಟ್ಟೆಗಳ ವಿವರ *: 78 -ಬ್ಯಾಡಗಿ ತಾಲೂಕು ಕಚೇರಿ, 78ಎ – ಬ್ಯಾಡಗಿ ತಾಲೂಕು ಕಚೇರಿ , 79- ಕಾಗಿನೆಲೆ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, 80 -ಹಾನಗಲ್ ತಾಲೂಕು ಕಚೇರಿ ಕೋರ್ಟ್ ಹಾಲ್, 81- ತಿಳುವಳ್ಳಿ ಗ್ರಾಮ ಪಂಚಾಯತ್ ಕಚೇರಿ, 82- ಅಕ್ಕಿ ಆಲೂರು ಗ್ರಾಮ ಪಂಚಾಯತ್ ಕಚೇರಿ, 83- ಬೊಮ್ಮನಹಳ್ಳಿ ಗ್ರಾಮ ಪಂಚಾಯತ್ ಕಚೇರಿ, 84- ಹಾವೇರಿ ತಸಿಲ್ದಾರ್ ಕಚೇರಿ, 85- ಹಾವೇರಿ ಎಸಿ ಕಚೇರಿ, 86- ನಗರಸಭೆ ಕಚೇರಿ, 87- ಗುತ್ತಲ್ ನಾಡಕಚೇರಿ, 88- ಕರ್ಜಗಿ ಗ್ರಾಮ ಪಂಚಾಯತ್ ಕಚೇರಿ, 89 -ಹoಸ ಬಾವಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, 90- ಹಿರೇಕೆರೂರ್ ತಾಲೂಕ ಕಚೇರಿ, 91- ರಟ್ಟಿಹಳ್ಳಿ ಪಟ್ಟಣ ಪಂಚಾಯತ್ ಕಚೇರಿ, 92- ಹೊಸ ಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆ, 93- ಸವಣೂರು ತಾಲೂಕು ಕಚೇರಿ, 94- ಹತ್ತಿಮತ್ತೂರ ಗ್ರಾಮ ಪಂಚಾಯತ್ ಕಚೇರಿ, 95- ಶಿಗ್ಗಾoವ ತಾಲೂಕ ಕಚೇರಿ, 96- ದುoಡಿಸಿ ಗ್ರಾಮ ಪಂಚಾಯತ್ ಕಚೇರಿ, 97- ಬಂಕಾಪೂರ್ ಟಿ ಎಂ ಸಿ ಕಚೇರಿ, 98- ರಾಣೆಬೆನ್ನೂರು ಹೊಸಮನಿ ಸಿದ್ದಪ್ಪ ಪಿಯು ಕಾಲೇಜ್, 99- ರಾಣೆಬೆನ್ನೂರು ಶಂಕರ ಮಾಡೆಲ್ ಸ್ಕೂಲ್, 100- ರಾಣೇಬೆನ್ನೂರು ತಾಲೂಕು ಪಂಚಾಯತ್ ಕಚೇರಿ, 101- ರಾಣೆಬೆನ್ನೂರು ತಹಶಿಲ್ದಾರ್ ಕಚೇರಿ, 102- ರಾಣೆಬೆನ್ನೂರು ಮುನ್ಸಿಪಲ್ ಹೈ ಸ್ಕೂಲ್, 103- ಮೆಡ್ಲೇರಿ ಗ್ರಾಮ ಪಂಚಾಯತ್ ಕಚೇರಿ, 104- ಹಲಗೇರಿ ಮಾಡೆಲ್ ಸೆಂಟ್ರಲ್ ಸ್ಕೂಲ್, 105 -ಕೊಡಿಹಾಳ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ.








