ಹಾವೇರಿಯಲ್ಲಿ ಇಂದಿರಾ ಗಾಂಧಿ ಜನ್ಮದಿನಾಚರಣೆ: ಮಾಜಿ ಪ್ರಧಾನಿಯ ಕೊಡುಗೆ ಸ್ಮರಿಸಿದ ಮಹಿಳಾ ಕಾಂಗ್ರೆಸ್ ಮುಖಂಡರು
ಹಾವೇರಿ: ಭಾರತದ ಮಾಜಿ ಪ್ರಧಾನಮಂತ್ರಿ ಹಾಗೂ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ ದಿವಂಗತ ಇಂದಿರಾ ಗಾಂಧಿಯವರ ಜನ್ಮದಿನದ ಅಂಗವಾಗಿ ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಗೌರವಪೂರ್ವಕವಾಗಿ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ವಸಂತಾ ಬಾಗೂರ್ ಸೇರಿದಂತೆ ಶಾಂತಕ್ಕ ಶಿರೂರು, ಲಲಿತಮ್ಮ ಹುಗ್ಗಿ, ಶೀಮಾ, ಮಮತಾ ಜಾಬಿನ್, ವೈಶಾಲಿ ಹಿರೇಮಠ ಸೇರಿದಂತೆ ಹಲವು ಮಹಿಳಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದೇಶದ ಏಕತೆ, ಅಖಂಡತೆ ಮತ್ತು ಅಭಿವೃದ್ಧಿಗಾಗಿ ಇಂದಿರಾ ಗಾಂಧಿಯವರು ನೀಡಿದ ಮಹತ್ವದ ಕೊಡುಗೆಯನ್ನು ಸ್ಮರಿಸಲಾಯಿತು. ಅವರ ಧೈರ್ಯ, ದಿಟ್ಟ ನಾಯಕತ್ವ ಹಾಗೂ ಹೋರಾಟದ ಮನೋಭಾವ ಇಂದಿಗೂ ಸ್ಫೂರ್ತಿದಾಯಕವಾಗಿದೆ ಎಂದು ಕಾರ್ಯಕ್ರಮದಲ್ಲಿ ನೆನಪಿಸಿಕೊಳ್ಳಲಾಯಿತು.
ಮಹಿಳಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತೆಯರು ಒಟ್ಟಾಗಿ ಮಾಜಿ ಪ್ರಧಾನಮಂತ್ರಿಯವರ ಜನ್ಮದಿನವನ್ನು ಗೌರವದಿಂದ ಆಚರಿಸಿದರು.







