ಸಾರ್ವಜನಿಕರ ಸಮಸ್ಯೆ ಆಲಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯವಾಣಿ ತೆರೆದಿದ್ದು, 8277506000ಗೆ ಕರೆ ಮಾಡಿ ಕುಂದು-ಕೊರತೆಗಳ ಬಗ್ಗೆ ದೂರು ನೀಡಬಹುದು.
ಇದು ಗ್ರಾಮ ಪಂಚಾಯತಿಗೆ ಸಂಬoಧಿಸಿದ ಯಾವುದೇ ಮಾಹಿತಿ ಹಾಗೂ ಕುಂದು ಕೊರತೆಗಳಿಗಾಗಿ ರಾಜ್ಯ ಮಟ್ಟದಲ್ಲಿ ಸ್ಥಾಪಿಸಿದ ಆರ್‌ಡಿಪಿಆರ್ ಇಲಾಖೆಯ ಏಕೀಕೃತ ಸಹಾಯವಾಣಿಯಾಗಿದೆ. ಗ್ರಾಮ ಪಂಚಾಯತಿಗೆ ಸಂಬoದಿಸಿದ ಕುಡಿಯುವ ನೀರು, ಸ್ವಚ್ಚತೆ, ನರೇಗಾ ಕೂಲಿ ಹಾಗೂ ಕಾಮಗಾರಿ ಬೇಡಿಕೆ, ನರೇಗಾ ಕಾಮಗಾರಿ ಕುರಿತಾದ ಯಾವುದಾದರೂ ಕುಂದು ಕೊರತೆಗಳಿದ್ದರೆ ಅಥವಾ ರಾಜ್ಯ ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಅವಶ್ಯವಿದ್ದರೆ ಆರ್‌ಡಿಪಿಆರ್ ಇಲಾಖೆಯ ಏಕೀಕೃತ ಸಹಾಯವಾಣಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು. ಈ ಏಕೀಕೃತ ಸಹಾಯವಾಣಿ ಮೂಲಕ ಗ್ರಾಮೀಣ ಜನರ ಸಮಸ್ಯೆಗಳನ್ನ ದಾಖಲಿಸಿಕೊಳ್ಳಲಾಗುತ್ತದೆ. ನಂತರ ಇದಕ್ಕೆ ಸ್ಪಂದಿಸಿ ಜಿಲ್ಲಾ ಹಾಗೂ ತಾಲೂಕು ಪಂಚಾಯತಿಗಳ ಮೇಲಾಧಿಕಾರಿಗಳ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತದೆ. ಅದಾದ ಮೇಲೆ ಸಂಬoಧಪಟ್ಟ ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಜನರ ಸಮಸ್ಯೆಗಳ ನಿವಾರಣೆ ಮಾಡುವ ಪ್ರಯತ್ನ ನಡೆಯುತ್ತಿದೆ.
`ಜನರು ಹಲವಾರು ಕುಂದು ಕೊರತೆಗಳನ್ನ ಮುಂದಿಟ್ಟುಕೊoಡು ಪ್ರತಿದಿನ ಗ್ರಾಮ ಪಂಚಾಯತಿಗೆ ಅಲೆಯುವುದನ್ನು ತಪ್ಪಿಸಲು ಈ ವ್ಯವಸ್ಥೆ ಜಾರಿಗೆ ಬಂದಿದೆ. ಈ ಬಗ್ಗೆ ಮುಂಡಗೋಡಿನ ಮಳಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕಸ್ತೂರಿ ತಳವಾರ ಮಳಗಿಯ ವಿವಿಧ ಪ್ರದೇಶಗಳಿಗೆ ತೆರಳಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.





Discussion about this post