`ಬ್ಯುಟಿ ಪಾರ್ಲರ್’ ತೆಗೆಯಬೇಕು ಎಂದುಕೊoಡಿರುವ ಮಹಿಳೆಯರಿಗಾಗಿ ಕೆನರಾ ಬ್ಯಾಂಕ್ ಸ್ವ ಉದ್ಯೋಗ ಸಂಸ್ಥೆ ಕುಮಟಾದಲ್ಲಿ `ಬ್ಯುಟಿ ಪಾರ್ಲರ್ ಮ್ಯಾನೇಜ್‌ಮೆಂಟ್’ ಶಿಬಿರ ನಡೆಸಲಿದೆ. ಅದೂ ಸಹ ಸಂಪೂರ್ಣ ಉಚಿತ!
ಜೂ 8ರಿಂದ 30 ದಿನಗಳ ಕಾಲ ಈ ತರಬೇತಿ ನಡೆಯಲಿದ್ದು, ಈಗಾಗಲೇ `ಬ್ಯುಟಿ ಪಾರ್ಲರ್’ ಉದ್ಯಮದಲ್ಲಿ ತೊಡಗಿಕೊಂಡು ಯಶಸ್ವಿ ಆದವರು ಭಾಗವಹಿಸಿ ಮಾಹಿತಿ ನೀಡಲಿದ್ದಾರೆ. ಕನ್ನಡ ಭಾಷೆ ಬರುವ 18ರಿಂದ 45 ವರ್ಷದ ಒಳಗಿನ ಮಹಿಳೆಯರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಬಡತನ ರೇಖೆಗಿಂತ ಕೆಳಗಿದ್ದವರಿಗೆ ಮೊದಲ ಆದ್ಯತೆ. ಭಾಗವಹಿಸಿದವರಿಗೆ ಉತ್ತಮ ಊಟ-ವಸತಿಯನ್ನು ಸಹ ಅವರೇ ಕೊಡುತ್ತಾರೆ. ಮಹಿಳೆಯರನ್ನು ಮುಖ್ಯವಾಹಿನಿಗೆ ತಂದು ಸ್ವಾವಲಂಬಿಯನ್ನಾಗಿಸುವುದೇ ಈ ಸಂಸ್ಥೆಯ ಉದ್ದೇಶ.
ಆಸಕ್ತರು ಅರ್ಜಿ ಜೊತೆ ಫೋಟೋ-ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ ಜರಾಕ್ಸ್ ಇರಿಸುವುದನ್ನು ಮರೆಯಬೇಡಿ. ಇನ್ನಷ್ಟು ಮಾಹಿತಿ ಬೇಕಿದ್ದಲ್ಲಿ 9449860007 ಅಥವಾ 9538281989ಗೆ ಫೋನ್ ಮಾಡಿ.
Discussion about this post