ಸಿದ್ದಾಪುರ: ಕಾನೂನಿಗೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳನ್ನು ಅತಿಕ್ರಮಣ ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸುವ ತಯಾರಿ ನಡೆಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನ್ಯಾಯವಾದಿ ರವೀಂದ್ರ ನಾಯ್ಕ ಬುಧವಾರ ಕಾನೂನು ಪಾಠ ಮಾಡಿದರು.
ಸಿದ್ದಾಪುರದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನ್ಯಾಯಾಲಯದ ಪ್ರಾಧಿಕಾರದ ಮುಖ್ಯಸ್ಥ ಅಶೋಕ ಬಸರೂರು ಅವರ ಕಲಾಪಕ್ಕೆ ಅರಣ್ಯವಾಸಿಗಳ ಪರವಾಗಿ ಹಾಜರಾದ ಅವರು `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅರಣ್ಯವಾಸಿಯ ಅರ್ಜಿಗೆ ಸಂಬoಧಿಸಿ ಮಾನ್ಯತೆ ಮತ್ತು ಪರಿಶೀಲನಾ ಪ್ರಕ್ರಿಯೆಯು ಪೂರ್ಣ ಆಗುವವರೆಗೆ ಸಾಗುವಳಿ ಅರಣ್ಯ ಭೂಮಿಯಿಂದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸತಕ್ಕದ್ದಲ್ಲ’ ಎಂಬ ಕಾನೂನು ಇರುವ ಬಗ್ಗೆ ಅಧಿಕಾರಿಗಳಿಗೆ ನೆನಪಿಸಿದರು. `ವಿಚಾರಣೆ ಪ್ರಾಧಿಕಾರದಿಂದ ಕರ್ನಾಟಕ ಅರಣ್ಯ ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳಿಗೆ ಬಂದಿರುವ ನೋಟೀಸ್‌ಗೆ ತಕರಾರು ಮತ್ತು ವಿಚಾರಣೆ ಸ್ಥಗಿತಕ್ಕೆ ಅರಣ್ಯವಾಸಿಗಳು ಕಾನೂನಾತ್ಮಕ ಅರ್ಜಿ ಸಲ್ಲಿಸಿದರು’ ಎಂಬ ವಿಷಯವನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಸ್ತಾಪಿಸಿದರು.
`ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ಭೂಮಿ ಹಕ್ಕಿಗೆ ಸಂಬoಧಿಸಿ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿ ಅರಣ್ಯವಾಸಿಗಳ ಅರ್ಜಿ ಪುನರ್‌ಪರಿಶೀಲನಾ ಸಂದರ್ಭದಲ್ಲಿ ಅರಣ್ಯವಾಸಿಗಳ ಸಾಗುವಳಿಗೆ ಆತಂಕಪಡಿಸದoತೆ ಆದೇಶವಿದೆ. ಆದೇಶ ಉಲ್ಲಂಘನೆ ಮಾಡುತ್ತಿರುವುದು ಖಂಡನಾರ್ಹ’ ಎಂದರು.
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ಗಿರೀಶ ನಾಯ್ಕ, ಕ್ಯಾದಗಿ, ಬಸವರಾಜ ಬೋಜಳ್ಳಿ ಅವರು ಉಪಸ್ಥಿತರಿದ್ದರು. ಅವರಣ್ಯವಾಸಿಗಳಾದ ಮಂಜು ಕನ್ನಾ ನಾಯ್ಕ, ರಾಮಚಂದ್ರ ನಾಯ್ಕ, ಕನ್ನಾ ಪುಟ್ಟ ನಾಯ್ಕ, ಕನ್ನಾ ಮಾರ್ಯ ನಾಯ್ಕ, ಬಿಲ್ಲುಮನೆ ಸಲ್ಲಿಸಿದರು. ಕಸಗೋಡ ಗಣೇಶ ಮೊಗೇರ ಕಪ್ಪಿನಗಡ್ಡಿ, ಬೊಮ್ಮ ಗೌಡ ಕಿತ್ತೊಳಿ, ನಂದನ ಭಟ್ಟ ದೊಡ್ಮನೆ ಮೊದಲಾದವರು ಅರ್ಜಿ ಸಲ್ಲಿಸಿದ್ದರು.
Discussion about this post