ಶಿರಸಿ: ಪ್ರತಿ ಗ್ರಾಮದಲ್ಲಿಯೂ ಸ್ವಚ್ಛತೆ ಕಾಪಾಡಬೇಕು ಎಂದು ಕರೆ ನೀಡಿರುವ ತಾ ಪಂ ಮುಖ್ಯಾಧಿಕಾರಿ ಸತೀಶ್ ಹೆಗಡೆ ಇದೀಗ ಯಂತ್ರಗಳನ್ನು ಬಳಸಿ ಕಸದ ರಾಶಿ ತೆರವು ಮಾಡುವ ಕೆಲಸ ಶುರು ಮಾಡಿದ್ದಾರೆ.
ಬುಧವಾರ ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿದ ಅವರು `ಸ್ವಚ್ಛತಾ ಅಭಿಯಾನ’ದ ಕೆಲಸ ವೀಕ್ಷಿಸಿದರು. 32 ಗ್ರಾ ಪಂ ವ್ಯಾಪ್ತಿಯಲ್ಲಿ ಬಿದ್ದಿದ್ದ ಕಸಗಳನ್ನು ಬುಧವಾರ ಒಮ್ಮೆ ಆರಿಸಲಾಯಿತು. ಬಸ್ ನಿಲ್ದಾಣ ಹಾಗೂ ಆರೋಗ್ಯ ಕೇಂದ್ರದ ಸುತ್ತ ರಾಶಿ ರಾಶಿ ಕಸ ಸಿಕ್ಕಿದವು. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದವರಿಗೆ ದಂಡ ವಿಧಿಸುವುದಾಗಿ ಅವರು ಎಚ್ಚರಿಸಿದರು. ತಾಲೂಕು ಪಂಚಾಯತ್ ವ್ಯವಸ್ಥಾಪಕ ಸುಬ್ರಾಯ್ ಭಟ್ ಜೊತೆಗಿದ್ದರು.
Discussion about this post