ಕುಮಟಾ: ದೇವಗುಂಡಿ ಕಲಭಾಗದಲ್ಲಿ ವಾಸವಾಗಿದ್ದ ಗಣೇಶ ಪಟಗಾರ್ (55) ಎಂಬಾತ ವಿಪರೀತ ಸರಾಯಿ ಕುಡಿಯುತ್ತಿದ್ದು, ಸಮಯಕ್ಕೆ ಸರಿಯಾಗಿ ಊಟ ಸೇವಿಸದೇ ಸಾವನಪ್ಪಿದ್ದಾನೆ.
ಮೇಲಿನಕೇರಿ ಹೆಗಡೆಯವನಾಗಿದ್ದ ಈತ ಕಲಭಾಗದಲ್ಲಿ ವಾಸವಾಗಿದ್ದ. ಆಗಾಗ ಕೂಲಿ ಕೆಲಸಕ್ಕೆ ಹೋಗಿ ಬರುತ್ತಿದ್ದ. ಜೂ 2ರಂದು ಅನಾರೋಗ್ಯಕ್ಕೆ ಒಳಗಾಗಿದ್ದ ಈತ ಊಟ ಮಾಡಿರಲಿಲ್ಲ. ರಾತ್ರಿ ಆತನ ಪತ್ನಿ ಪರಮೇಶ್ವರಿ ಆತನ ಮೈ ಮುಟ್ಟಿದಾಗ ಸಾವನಪ್ಪಿರುವುದು ಗೊತ್ತಾಗಿದೆ.
ಊಟ ಸೇವಿಸದೇ ಸಾವನಪ್ಪಿದ ಮದ್ಯ ವ್ಯಸನಿ

Leave a comment