ಚಿತ್ರಕಲೆ – ಅನಿಮೇಶನ್ ಕಲಿಕೆಗೆ ಇಲ್ಲಿದೆ ಅವಕಾಶ
ಚಿತ್ರಕಲೆ ಹಾಗೂ ಅನಿಮೇಶನ್ ವಲಯದಲ್ಲಿ ಆಸಕ್ತಿ ಇರುವವರಿಗೆ ಕಾರವಾರದ ಟಾಗೂರ್ ಚಿತ್ರಕಲಾ ವಿದ್ಯಾಲಯದಲ್ಲಿ ಕಲಿಕೆಗೆ ಅವಕಾಶವಿದೆ.
ಡಿಪ್ಲೋಮಾ, ಪಿಯುಸಿ, ಐಟಿಐ ಅಥವಾ ಯಾವುದೇ ಪದವಿ ಆದವರು ಇಲ್ಲಿ ಸೇರಬಹುದು. ಹಂಪಿ ವಿಶ್ವ ವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಏಕೈಕ ಚಿತ್ರಕಲಾ ಶಾಲೆ ಇದಾಗಿದೆ. ಸ್ವಂತ ಉದ್ಯೋಗ, ಚಿತ್ರಕಲಾ ಶಿಕ್ಷಕ ಹಾಗೂ ಅನಿಮೇಶನ್ ವೃತ್ತಿಯವರಿಗೆ ಈ ಕಲಿಕೆ ಸಹಕಾರಿ. ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯ ಹಾಗೂ ಬಸ್ ಪಾಸ್ ದೊರೆಯಲಿದೆ. ಜುಲೈ 30ರ ಒಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ 9742022036ನ್ನು ಸಂಪರ್ಕಿಸಬಹುದು.
