ಯಕ್ಷಗಾನ ಅಕಾಡೆಮಿಯು ಯಕ್ಷಗಾನಕ್ಕೆ ಸಂಬoಧಿಸಿದ ಪುಸ್ತಕ ಬರೆದವರಿಗೆ ಪ್ರಶಸ್ತಿ ನೀಡುವ ಉದ್ದೇಶದಿಂದ ಅರ್ಜಿ ಕರೆದಿದೆ.
ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ ಇತ್ಯಾದಿ ಕಲಾಪ್ರಕಾರಗಳ ಕುರಿತು 2022-23ನೇ ವರ್ಷದಲ್ಲಿ ಪುಸ್ತಕ ಪ್ರಕಟಿಸಿದವರು ಅರ್ಜಿ ಸಲ್ಲಿಸಬಹುದು. ಸಂಗೀತ, ಅಭಿನಯ, ಸಂಶೋಧನೆ, ವಿಮರ್ಶೆ, ಜೀವನ ಚರಿತ್ರೆ, ಪ್ರಸಂಗಗಳ ಕುರಿತಾದ ಪುಸ್ತಕಗಳಿಗೂ ಅವಕಾಶವಿದೆ. ಜುಲೈ 25ರ ಒಳಗೆ 4 ಪುಸ್ತಕಗಳ ಜೊತೆ ಅರ್ಜಿ ಸಲ್ಲಿಸಬಹುದು. ಪ್ರಶಸ್ತಿ 25 ಸಾವಿರ ರೂ ಮೊತ್ತವನ್ನು ಒಳಗೊಂಡಿದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ:
ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ
ಕನ್ನಡ ಭವನ, ಎರಡನೇ ಮಹಡಿ
ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ
ಬೆಂಗಳೂರು 560002
ಮಾಹಿತಿಗೆ ಕಚೇರಿ ಅವಧಿಯಲ್ಲಿ 080-22113146ಗೆ ಸಂಪರ್ಕಿಸಿ
Discussion about this post