ಹಲವಾರು ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಸಹಾಯಕಿಯರನ್ನು ಪದೋನ್ನತಿಗೊಳಿಸದೇ ಬೇರೆ ಕಡೆ ವರ್ಗ ಮಾಡಲಾಗುತ್ತಿದ್ದು, ಇದರಿಂದ ಅವರಿಗೆ ಅನ್ಯಾವಾಗಿದೆ.
ಮುಂಡಗೋಡಿನ ಮೇಲಿನಕೇರಿ ಅಂಗನವಾಡಿ ಕೇಂದ್ರದಲ್ಲಿ ಮಂಗಲಾ ಯೋಗೇಶ್ವರ ಭಂಡಾರಿ ಅವರು ಕಳೆದ 15 ವರ್ಷಗಳಿಂದ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಅವರನ್ನು ಕಾರ್ಯಕರ್ತೆಯಾಗಿ ಪದೋನ್ನತಿಗೊಳಿಸದೇ ವರ್ಗಾವಣೆ ಮಾಡಿದ್ದಾರೆ. ಚೌಡಳ್ಳಿಯ ಮೂರನೇ ಅಂಗನವಾಡಿ ಕಾರ್ಯಕರ್ತೆ ನೀಲವ್ವ ಲಕ್ಷö್ಮಣ ವಾಲ್ಮೀಕಿ ಅವರನ್ನು ಕೂಡ ಪದೋನ್ನತಿ ಮಾಡದೇ ವರ್ಗಾವಣೆ ಮಾಡಿದ್ದಾರೆ. ಕಾರವಾರ ಕರ್ಕರ ಅಂಗನವಾಡಿ ಕೇಂದ್ರದ ಸಹಾಯಕಿಯನ್ನು ಕಮಿಟಿಯಲ್ಲಿ ಚರ್ಚೆ ಮಾಡದೇ ವಜಾ ಮಾಡಲಾಗಿದೆ. ಹೊನ್ನಾವರದ ತುಳಸಿ ನಗರದಲ್ಲಿ ಅಂಗನವಾಡಿ ಸಹಾಯಕಿ ಇದ್ದರೂ ಮತ್ತೊಂದು ಸಹಾಯಕಯನ್ನು ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ.
`ಅಂಗನವಾಡಿಗೆ ವಿತರಿಸುವ ಗೋಧಿ ರವೆಯು ಹೊಟ್ಟಿನ ರೀತಿಯಲ್ಲಿದ್ದು, ರಸೀದಿ ಪುಸ್ತಕದಲ್ಲಿ ಮಾತ್ರ ಮಕ್ಕಳಿಗೆ ಲಾಡು ನೀಡಿದ ದಾಖಲೆಗಳಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸಾದಿಲ್ವಾರು ಖರ್ಚು ಕೂಡ ನೀಡುತ್ತಿಲ್ಲ. ಸರಕಾರದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ ಮೊಬೈಲ್’ಗೆ ಸಿಮ್ ಸಹ ಇಲ್ಲ’ ಎಂದು ಮುಂಡಗೋಡಿನ ಬಸವರಾಜ ಸಂಗಮೇಶ್ವರ ಹಾಗೂ ಹೊನ್ನಾವರದ ಅನಿತಾ ಶೇಟ್ ಈ ಬಗ್ಗೆ ಮೇಲಧಿಕಾರಿಗಳಿಗೆ ದೂರಿದ್ದಾರೆ.
Discussion about this post