6 Skip to content

`ಜಾಲತಾಣ ತಾಣಗಳ ಮೇಲೆ ಪೊಲೀಸ್ ಕಣ್ಗಾವಲು’

`ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುಳ್ಳು ಸುದ್ದಿ ಹರಡುತ್ತಿದ್ದು, ಅಂಥವರ ಮೇಲೆ ಪೊಲೀಸ್ ಇಲಾಖೆ ನಿಗಾ ಇಡಲಿದೆ’ ಎಂದು ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಹೇಳಿದ್ದಾರೆ.
ಕಾರವಾರದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು `ಉತ್ತರ ಕನ್ನಡ ಜಿಲ್ಲೆ ನನಗೆ ಹೊಸದಲ್ಲ. ಈ ಹಿಂದೆ ಭಟ್ಕಳದಲ್ಲಿ ಕೆಲಸ ನಿರ್ವಹಿಸಿದ್ದ ನನಗೆ ಜಿಲ್ಲೆಯ ಸಂಪೂರ್ಣ ಚಿತ್ರಣ ಗೊತ್ತಿದೆ’ ಎಂದು ಹೇಳಿದರು. `ಗುಪ್ತಚರ ಇಲಾಖೆಯಲ್ಲಿದ್ದ ನನಗೆ ಜಿಲ್ಲೆಯ ಎಲ್ಲಾ ಹೋಬಳಿಯ ಬಗ್ಗೆಯೂ ಮಾಹಿತಿಯಿದೆ. ಇಲ್ಲಿನ ಅಕ್ರಮ ಚಟುವಟಿಕೆ ನಿಗ್ರಹ ಮೊದಲ ಕೆಲಸ’ ಎಂದರು. `ಗಡಿಭಾಗದಲ್ಲಿ ಕೆಲಸ ಮಾಡುವುದು ಸಾಹಸದ ಕೆಲಸ. ಆದರೂ, ಎಲ್ಲಡೆ ಸಿಸಿ ಟಿವಿ ಅಳವಡಿಸಿ ಅಪರಾಧ ಪ್ರಕರಣ ಕಡಿಮೆ ಮಾಡುವುದು ನನ್ನ ಗುರಿ. ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಹದ್ದಿನ ಕಣ್ಣು ಇಡಲಾಗಿದ್ದು, ಸುಳ್ಳು ಸುದ್ದಿ ಹರಡಬಾರದು’ ಎಂದವರು ಮನವಿ ಮಾಡಿದರು.

 

Leave a comment

Leave a Reply

You cannot copy content of this page