ಭಟ್ಕಳ: ಹೈದರಾಬಾದಿನಿಂದ ಭಟ್ಕಳಕ್ಕೆ ಬರುತ್ತಿದ್ದ ಯುವಕನ ಮೇಲೆ ಖಾಸಗಿ ಬಸ್’ನಲ್ಲಿ ಸೋಮವಾರ ರಾತ್ರಿ ನಡೆದ ಹಲ್ಲೆ ಪ್ರಕರಣ ಹೊಸ ತಿರುವು ಪಡೆದಿದೆ. ಬಸ್ಸಿನಲ್ಲಿ ಯುವಕನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ಬಸ್ ವ್ಯವಸ್ಥಾಪಕ ಮಂಗಳೂರಿನ ಮನೀಷ್ ಬುಧವಾರ ತಂಝೀo ನಿಯೋಗದವರಲ್ಲಿ ಹೇಳಿದ್ದಾರೆ. ಆದರೆ, ಬಸ್ಸಿನಲ್ಲಿನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ಕೊಟ್ಟಿಲ್ಲ.
ಬಸ್ ನಲ್ಲಿ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರು ಸೇರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಹಲ್ಲೆಗೊಳಗಾಗಿರುವ ಹೆಬಳೆಯ ಮುಜೀಬರ‍್ರಹ್ಮಾನ್ ಆರೋಪಿಸಿದ್ದರು. ಬುಧವಾರದಂದು ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿಯವರ ನೇತೃತ್ವದಲ್ಲಿ ಮಂಗಳೂರು ಖಾಸಗಿ ಬಸ್ ವ್ಯವಸ್ಥಾಪಕ ಮನೀಷ್ ಎಂಬುವವರನ್ನು ಕರೆಸಿ ಸಭೆ ನಡೆಸಿದ್ದು ಘಟನೆಯ ವಿವರವನ್ನು ಪಡೆದರು. ಬಸ್‌ನಲ್ಲಿದ್ದ ಸಿಸಿಟಿವಿ ಕ್ಯಾಮರಾದ ಕುರಿತು ಕೇಳಿದಾಗ `ಅದು ಹಾಳಾಗಿದೆ’ ಎಂದು ಬಸ್ಸಿನವರು ಉತ್ತರ ನೀಡಿದ್ದಾರೆ.
Discussion about this post