ಭಾರತೀಯ ಸೇನೆ ಸೇರಿ ಶಿಸ್ತಿನ ಸಿಫಾಯಿಯ ಹಾಗೇ ಬದುಕಬೇಕು ಎಂಬುದು ಹಲವರ ಕನಸು. ದೇಶಸೇವೆಗಾಗಿ ದುಡಿಯುವ ತವಕ ಇರುವವರಿಗೆ ಅಗತ್ಯವಿರುವ ತರಬೇತಿ ನೀಡುವ ಸಂಸ್ಥೆ ಕಾರವಾರದ ಮಾಜಾಳಿಯಲ್ಲಿದೆ. `ವೀರ ಬಹಾದ್ದೂರ್ ಹೆಂಜಾ ನಾಯ್ಕ’ ಅವರ ಹೆಸರಿನಲ್ಲಿ ಇಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತದೆ. 2022-23ರಲ್ಲಿ ಇಲ್ಲಿ ತರಬೇತಿ ಪಡೆದ 31 ಮಂದಿ `ಅಗ್ನಿವೀರ’ರಾಗಿ ಹೊರಹೊಮ್ಮಿದ್ದಾರೆ.
ಭಾರತೀಯ ಸೇನೆ ಮಾತ್ರವಲ್ಲದೇ ಅಸ್ಸಾಂ ರೈಫಲ್ಸ್, ಗಡಿ ಭದ್ರತಾ ಪಡೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಸಶಸ್ತç ಸೀಮಾ ಬಲ್, ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ರಾಜ್ಯ ಪೊಲೀಸ್ ಸೇವೆಗಳಿಗೂ ಇಲ್ಲಿನ ತರಬೇತಿ ಅನುಕೂಲ. ಕಠಿಣವಾದ ಸೇನಾ ಆಯ್ಕೆ ಪ್ರಕ್ರಿಯೆಗಳು, ತನ್ನಲ್ಲಿ ಇರಬೇಕಾದ ಅರ್ಹತೆ, ತಾನು ಪಡೆಯಬೇಕಾದ ತರಬೇತಿ ಇವೆಲ್ಲವುಗಳ ಮಾಹಿತಿಯ ಕೊರತೆಯಿಂದ ಸೇನಾ ನೇಮಕಾತಿಗಳಿಂದ ಹಿಂತಿರುಗುವವರೇ ಜಾಸ್ತಿ. ಹೀಗಿರುವಾಗ ಆಯ್ಕೆ ಪ್ರಕ್ರಿಯೆಯಲ್ಲಿ ಅನರ್ಹರಾಗುವವರನ್ನು ಅರ್ಹರನ್ನಾಗಿಸುವ ನಿಟ್ಟಿನಲ್ಲಿ ಇಲ್ಲಿ ತರಬೇತಿ ನೀಡಲಾಗುತ್ತದೆ.
ಬರೇ 4 ತಿಂಗಳ ಅವಧಿಯಲ್ಲಿ ಪರಿಪೂರ್ಣ ವ್ಯಕ್ತಿತ್ವದ ಸೇನಾ ನಾಯಕನ್ನು ಈ ಸಂಸ್ಥೆ ರೂಪಿಸುತ್ತದೆ. ಪ್ರತಿ ಬಾರಿ 100 ಮಂದಿಯoತೆ ವರ್ಷðಕ್ಕೆ 3 ಬಾರಿ ಪ್ರವೇಶ ಪ್ರಕಟಣೆ ಹೊರಡಿಸಿ, ತರಬೇತಿ ನೀಡಲಾಗುತ್ತದೆ. ಕನ್ನಡಿಗರಿಗೆ ಇಲ್ಲಿ ಮೊದಲ ಆದ್ಯತೆ. 10ನ ತರಗತಿಯಲ್ಲಿ ಶೇ 45ರಷ್ಟು ಅಂಕಪಡೆದು ಪಾಸಾದ 17ರಿಂದ 20 ವರ್ಷದ ಒಳಗಿನವರು ತರಬೇತಿಗೆ ಅರ್ಹರು. ಒಬ್ಬರಿಗೆ ಒಮ್ಮೆ ಮತ್ರ ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿದ್ದು, ಉಚಿತ ಊಟ-ವಸತಿ ಜೊತೆ ಬೂಟು-ಸಮವಸ್ತವನ್ನು ಉಚಿತವಾಗಿ ಕೊಡಲಾಗುತ್ತದೆ. ಅಭ್ಯರ್ಥಿ ದೈಹಿಕವಾಗಿ 50 ಕೆಜಿ ತೂಕ, 166ಸೆಂ.ಮೀ ಎತ್ತರದ ಜೊತೆ 77+5ರ ಎದೆಯ ಸುತ್ತಳತೆ ಹೊಂದಿರಬೇಕು. 1.6 ಕಿಮೀ ದೂರವನ್ನು 6 ನಿಮಿಷದಲ್ಲಿ ಪೂರ್ಣಗೊಳಿಸಬೇಕು. ಇದು ಸಾಧ್ಯ ಎನ್ನುವವರಿಗೆ ಮಾಜಿ ಸೈನಿಕರು ಆಗಮಿಸಿ ತರಬೇತಿ ನೀಡುತ್ತಾರೆ. ತರಬೇತಿ ಅವಧಿಯಲ್ಲಿ 3 ಬಾರಿ ಪರೀಕ್ಷೆಗಳನ್ನು ನಡೆಸಿ, ಲಿಖಿತ ಪರೀಕ್ಷೆ ಎದುರಿಸುವ ಬಗ್ಗೆಯೂ ತಿಳಿಸಲಾಗುತ್ತದೆ.
Discussion about this post